Tuesday, 11th December 2018  

Vijayavani

Breaking News

ಜೀವಂತ ಯುವಕನನ್ನು 7 ಗಂಟೆ ಶವಾಗಾರದಲ್ಲಿಟ್ಟ ಕಿಮ್ಸ್​ ವೈದ್ಯರು

Monday, 08.01.2018, 1:21 PM       No Comments

ಹುಬ್ಬಳ್ಳಿ: ಬದುಕಿದ್ದ ಯುವಕನನ್ನು ಸುಮಾರು ಏಳು ಗಂಟೆಗಳ ಕಾಲ ಶವಾಗಾರದಲ್ಲಿಟ್ಟ ಘಟನೆ ಇಲ್ಲಿನ ಕಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಇಲ್ಲಿನ ಆನಂದ್​ ನಗರದ ನಿವಾಸಿ ಪ್ರವೀಣ್​ ಮೂಳೆ(23) ಎಂಬ ಯುವಕ ಭಾನುವಾರ ಸಂಜೆ 7 ಗಂಟೆಯ ಹೊತ್ತಿಗೆ ನಡೆದ ಕಾರ್​ ಅಪಘಾತವೊಂದರಲ್ಲಿ ಗಾಯ ಗೊಂಡಿದ್ದರು. ರಾತ್ರಿ 8 ಗಂಟೆಯ ವೇಳೆಗೆ ಸಂಬಧಿಕರು ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರವೀಣ್​ ಮರಣ ಹೊಂದಿದ್ದಾರೆಂದು ರಾತ್ರಿ 3 ಗಂಟೆಯ ವೇಳೆಗೆ ಅವರನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು.

ಸೋಮವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ತೆರಳಿದಾಗ ಪ್ರವೀಣ್​ ಇನ್ನೂ ಬದುಕಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕಿಮ್ಸ್​ನಿಂದ ಪ್ರವೀಣ್​ನನ್ನು ಸಂಬಧಿಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು 20 ನಿಮಿಷದ ಹಿಂದೆ ಯುವಕ ತೀರಿಕೊಂಡಿದ್ದಾಗಿ ಹೇಳಿದ್ದಾರೆ.

ಈ ವಿಷಯವನ್ನು ತಿಳಿದ ಸಂಬಧಿಕರು ಕಿಮ್ಸ್​ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top