ಬಳ್ಳಾರಿ: ರಾತ್ರಿ ವೇಳೆ ವಾಹನಗಳ ಅಪಘಾತ ತಪ್ಪಿಸುವ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆ ಪೊಲೀಸರು ಮಂಗಳವಾರ ವಿವಿಧ ವಾಹನಗಳಿಗೆ ರಿಪ್ಲೆಕ್ಷನ್ ಸ್ಟಿಕ್ಕರ್ ಅಂಟಿಸಿದರು.
ಅಪರಾಧ ಮಾಸಾಚರಣೆಯ ಅಂಗವಾಗಿ ಟ್ರಾೃಕ್ಟರ್, ಬೈಕ್, ಗೂಡ್ಸ್ ವಾಹನಗಳಿಗೆ ರಿಪ್ಲೆಕ್ಷನ್ ಸ್ಟಿಕ್ಕರ್ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೂರು ದಿನ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಗುರಿ ಹೊಂದಲಾಗಿದೆ. ರಾತ್ರಿ ಸಮಯದಲ್ಲಿ ನಗರ ಸೇರಿ ವಿವಿಧೆಡೆ ಹೆಚ್ಚಿನ ಅಪಘಾತಗಳಾಗುತ್ತಿವೆ. ರಿಪ್ಲೆಕ್ಷನ್ ಸ್ಟಿಕ್ಕರ್ ಅಳವಡಿಸಿದರೇ ಎದುರು ಮತ್ತು ಹಿಂದೆ ಬರುವ ವಾಹನಗಳಿಗೆ ಮುಂದೆ ಯಾವ ವಾಹನ ಹೊರಟಿದೆ ಎನ್ನುವ ಗುರುತು ತಿಳಿಯಲಿದೆ.ಎಷ್ಟೋ ಸಂದರ್ಭಗಳಲ್ಲಿ ವಾಹನಗಳಿಗೆ ಬೆಳಕಿನ ವ್ಯವಸ್ಥೆಯಿದ್ದರೂ ಬೆಳಕಿನ ಪ್ರತಿಫಲವಿಲ್ಲದೆ ಇರುವುದರಿಂದ ಅಪಘಾತಗಳು ಜರುಗುತ್ತಿವೆ. ಅಪಘಾತ ಪ್ರಕರಣಗಳನ್ನು ತಗ್ಗಿಸುವುದಕ್ಕಾಗಿ ಸ್ಟಿಕ್ಕರ್ ಅಳವಡಿಸಲಾಗುತ್ತಿದೆ ಎಂದು ಪಿಐ ಗಾಯಿತ್ರಿ ತಿಳಿಸಿದರು.