ತುಮಕೂರು: ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ಸಮೀಪ ಸ್ಲೀಪರ್ ಕೋಚ್ ಖಾಸಗಿ ಬಸ್ ಹಾಗೂ ಒಮಿನಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿಗೆ ಬೆಂಕಿಹತ್ತಿಕೊಂಡು ಮೂವರು ಜೀವಂತದಹನವಾಗಿದ್ದಾರೆ.
ಎನ್ ಎಚ್ 206 ರಸ್ತೆಯಲ್ಲಿ ದೊಡ್ಡಗುಣಿ ಕೆರೆ ಏರಿ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶ್ರೀಶ ಟ್ರಾವೆಲ್ಸ್ ಖಾಸಗಿ ಬಸ್ ಹಾಗೂ ಎನ್ ಹೊಸಹಳ್ಳಿ ಗ್ರಾಮದ ನರಸಮ್ಮ ಇವರನ್ನು ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರುತಿ ಒಮ್ನಿ ಮಧ್ಯೆ ಅಪಘಾತವಾಗಿದೆ.
ಒಮ್ನಿ ಕಾರಿನಲ್ಲಿದ್ದ ವಸಂತ್ ಕುಮಾರ್, ರಾಮಯ್ಯ ಕಾರಿನಲ್ಲೇ ಸುಟ್ಟು ಹೋಗಿದ್ದು , ತೀವ್ರವಾಗಿ ಗಾಯಗೊಂಡ ನರಸಮ್ಮ ಸಹ ಮೃತ ಪಟ್ಟಿದ್ದಾರೆ. ಕಾರಿನಲ್ಲಿದ್ದ ನರಸಿಂಹ ಮೂರ್ತಿ, ರಾಧಾಮಣಿ, ರವಿ ಗಾಯಗೊಂಡಿದ್ದು ಹೈವೇ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿಗೂ ಸಹ ಬೆಂಕಿ ತಗುಲಿದ್ದು ಬಸ್ ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.