ನಂಜನಗೂಡಿನಿಂದ ದರ್ಶನಕ್ಕೆ ಬರುತ್ತಿದ್ದ ಕುಟುಂಬ
ಹನೂರು : ತಾಲೂಕಿನ ಕೌದಳ್ಳಿ ಸಮೀಪದ ಎಂ.ಜಿ.ದೊಡ್ಡಿ ಬಳಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮಗುಚಿ ಬಿದ್ದು ಮೂವರು ಗಾಯಗೊಂಡಿದ್ದಾರೆ. ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದ ಮಂಜುಳಾ, (38) ಈಕೆಯ ಪತಿ ಪ್ರಕಾಶ್ (45) ಹಾಗೂ ಪುತ್ರ ಸಚಿನ್ (20) ಗಾಯಗೊಂಡವರು. ಇವರೆಲ್ಲರೂ ಮಧ್ಯಾಹ್ನ ದೇವರ ದರ್ಶನಕ್ಕಾಗಿ ಮ.ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.ಎಂ.ಜಿ ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ಬಂದ ಹಾವನ್ನು ರಕ್ಷಿಸುವ ಭರದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿತು. ಗಾಯಗೊಂಡ ಮೂವರನ್ನೂ ಸ್ಥಳೀಯರು ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಸ್ಥಳಕ್ಕಾಗಮಿಸಿದ ಹೊಯ್ಸಳ ಪೊಲೀಸರು ಪರಿಶೀಲಿ ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರು. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:accident news HANUR