ವಿಜಯವಾಣಿ ಸುದ್ದಿಜಾಲ ಕಮಲಾಪುರ (ಕಲಬುರಗಿ)
ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಮಲಾಪುರ ಬಳಿಯ ಕುದುರೆಮುಖ ಗುಡ್ಡದ ಬಳಿ ಕಾರ್ , ಬುಲೆರೋ ಪಿಕಪ್ ಮುಖಾಮುಖಿ ಡಿಕ್ಕಿ ಹೊಡೆದು ನಾಲ್ಕು ಜನ ಸಾವನಪ್ಪಿದ ಘಟನೆ ಶನಿವಾರ ಬೆಳಗಿನ ಜಾವ ಜರುಗಿದೆ.
ಹುಮನಾಬಾದ್ ಮಾರ್ಗದಿಂದ ಆಗಮಿಸುತ್ತಿದ್ದ ಕಾರು ಮತ್ತು ಆ ಕಡೆಗೆ ಹೊರಟಿದ್ದ ಪಿಕಪ್ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಇದ್ದವರು ಮೃತಪಟ್ಟಿದ್ದಾರೆ.
ಮೃತರು ಹೈದರಾಬಾದ್ ಮೂಲದವರಾಗಿದ್ದು ಭಾರ್ಗವ ಕೃಷ್ಣ ಅವರ ಪತ್ನಿ ಸಂಗೀತಾ ಹಾಗೂ ಪುತ್ರ ರಾಘವನ್ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ಗೊತ್ತಾಗಿಲ್ಲ.
ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಎಸ್ಪಿ ಬಿಂದುಮಣಿ ಎಂ.ಎನ್, ಸಿಪಿಐ ಶಿವಶಂಕರ ಸಾಹು, ಪಿಎಸ್ ಐ ಆಶಾ, ಸಂಗೀತಾ ಹಾಗೂ ಸಿಬ್ಬಂದಿ ಭೇಟಿ ನೀಡಿದರು.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
TAGGED:Accident