ಅಪಘಾತಕ್ಕೆ ಇಬ್ಬರು ಬಲಿ

* ಪಾಣೆಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್-ಕಾರು ಡಿಕ್ಕಿ ಇನ್ನಿಬ್ಬರ ಸ್ಥಿತಿ ಗಂಭೀರ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿ.ಸಿ.ರೋಡಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಳೇ ಟೋಲ್‌ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರ ಗಾಯ ಗೊಂಡಿದ್ದಾರೆ.
ಮಂಗಳೂರು ಜಪ್ಪುಗುಡ್ಡೆ ನಿವಾಸಿಗಳಾದ ರುಕ್ಮಿಣಿ ಸಿ.ಮಲ್ಲಿ(63), ಸರೋಜಿನಿ ಟಿ.ಶೆಟ್ಟಿ (65)ಮೃತಪಟ್ಟವರು. ಕಾರಿನಲ್ಲಿದ್ದ ಅನುಷಾ(40), ಮಂಗಳೂರಿನ ಶಕ್ತಿನಗರ ನಿವಾಸಿ ಕಾರು ಚಾಲಕ ಉಮೇಶ್(45) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರೋಜಿನಿ ರುಕ್ಮಿಣಿಯವರ ಪತಿಯ ಸಹೋದರಿ. ಚೆನ್ನೈಯಲ್ಲಿ ವಾಸವಾಗಿರುವ ಈಕೆ ಸಹೋದರನ ಮನೆಗೆ ಬಂದಿದ್ದರು. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ನ ಎದುರುಭಾಗ ಜಖಂಗೊಂಡಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾಕ್ಸ್))

ಗೃಹಪ್ರವೇಶಕ್ಕಾಗಿ ಹೋಗುತ್ತಿದ್ದರು!
ಕಾರಿನಲ್ಲಿದ್ದವರು ಪಾಣೆಮಂಗಳೂರು ನರಿಕೊಂಬು ಪರಿಸರದಲ್ಲಿ ನಡೆಯುತ್ತಿದ್ದ ಗೃಹಪ್ರವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿನಿಂದ ತೆರಳುತ್ತಿದ್ದರು. ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಪಾಣೆಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಆಡಿಟೋರಿಯಂ ಎದುರು ಡಿಕ್ಕಿ ಹೊಡೆಯಿತು. ಕಾರು ಚಾಲಕ ಸಹಿತ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ರುಕ್ಮಿಣಿ ಮತ್ತು ಸರೋಜಿನಿ ಶೆಟ್ಟಿ ಮೃತಪಟ್ಟರು. ಚಾಲಕ ಉಮೇಶ್ ಹಾಗೂ ಅನುಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಫೋಟೋ……………………..ಬಿಟಿಡಬ್ಲ್ಯು_ಎ26_3ಎ, 3ಬಿ
ಪಾಣೆಮಂಗಳೂರು ರಾ.ಹೆ.ಹಳೇ ಟೋಲ್‌ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು ಮತ್ತು ಬಸ್‌ನ ಮುಂಭಾಗ.

Leave a Reply

Your email address will not be published. Required fields are marked *