More

  ಸೊರಬ ತಾಲೂಕಿನಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಅಡಿ ಸಿಲುಕಿ ರೈತ ಸಾವು

  ಶಿವಮೊಗ್ಗ: ಸೊರಬ ತಾಲೂಕಿನ ನೇರಲಿಗೆ ಗ್ರಾಮದಲ್ಲಿ ಟ್ರ್ಯಾಕ್ಟರ್ ಟ್ರೇಲರ್ ಅಡಿ ಸಿಲುಕೊ ರೈತನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ವಿರೂಪಾಕ್ಷಪ್ಪ (45) ಮೃತಪಟ್ಟವರು.ಮಂಜಪ್ಪ ಎಂಬುವರ ಜಮೀನಿನಲ್ಲಿ ಮಣ್ಣು ಹೊರಹಾಕುವಾಗ ಅವಘಢ ಸಂಭವಿಸಿದೆ.

  ಟ್ರೈಲರ್ ನಲ್ಲಿದ್ದ ಮಣ್ಣು ಹೊರ ತೆಗೆದು ಹಾಕುವಾಗ ಚಾಲನೆಯಲ್ಲಿದ್ದ ಟ್ರ್ಯಾಕ್ಟರ್ ನ ಇಂಜಿನ್ ಮಗುಚಿಕೊಂಡಿದೆ. ಪರಿಣಾಮ ವಿರೂಪಾಕ್ಷಪ್ಪ ಅವರು ಟ್ರೈಲರ್ ಅಡಿ ಸಿಲುಕಿದ್ದಾರೆ.ಇದರಿಂದ ವಿರೂಪಾಕ್ಷಪ್ಪ ಅವರ ಮುಖ, ಎದೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

  ತಕ್ಷಣವೇ ಅವರನ್ನು ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts