ಭೀಕರ ಅಪಘಾತ: ಕರ್ನಾಟಕ-ತಮಿಳುನಾಡು ಗಡಿಗೋಪುರಕ್ಕೇ ಡಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ!

ಆನೇಕಲ್: ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಗುರುತಾಗಿ ಇರುವ ಗೋಪುರಕ್ಕೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಮಾತ್ರವಲ್ಲ, ಐತಿಹಾಸಿಕ ಗಡಿಗೋಪುರಕ್ಕೂ ಹಾನಿಯಾಗಿದೆ. ಮತ್ತೊಂದೆಡೆ ಇದೇ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶವೂ ವ್ಯಕ್ತವಾಗಿದೆ. ಕರ್ನಾಟಕ-ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಐತಿಹಾಸಿಕ ಗಡಿಗೋಪುರಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗೋಪುರಕ್ಕೆ ಹಾನಿಯಾಗಿದ್ದಲ್ಲದೆ, ಟಿಪ್ಪರ್ ಕೂಡ ಮಗುಚಿ ಬಿದ್ದಿದೆ. ತಮಿಳುನಾಡಿನ ಹೊಸೂರು ಕಡೆಯಿಂದ ಕರ್ನಾಟಕಕ್ಕೆ ಬರುತ್ತಿದ್ದ ಟಿಪ್ಪರ್ ಚಾಲಕನ ಬೇಜವಾಬ್ದಾರಿಯ ಚಾಲನೆಗೆ ಈ ಅಪಘಾತ ಸಂಭವಿಸಿದೆ. ಘಟನೆ ಸಂಭವಿಸಿದ … Continue reading ಭೀಕರ ಅಪಘಾತ: ಕರ್ನಾಟಕ-ತಮಿಳುನಾಡು ಗಡಿಗೋಪುರಕ್ಕೇ ಡಿಕ್ಕಿ ಹೊಡೆದು ಮಗುಚಿ ಬಿದ್ದ ಲಾರಿ!