ಪುತ್ತೂರು: ಉರ್ಲಾಂಡಿಯಲ್ಲಿ ರಸ್ತೆಯಲ್ಲೇ ಶಾಮಿಯಾನ ಲಾರಿ ನಿಲ್ಲಿಸಿದ್ದು, ತುಂತುರು ಮಳೆಯಿಂದ ವಾಹನ ಕಾಣದೆ ಬೈಕ್ ಸವಾರ ಡಿಕ್ಕಿ ಹೊಡೆದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕುಂಜುರುಪಂಜ ಸಮೀಪದ ಸುದೀಪ್ ಚೊಕ್ಕಾಡಿ (೩೫) ಮೃತ ದುರ್ದೈವಿ. ಭಾನುವಾರ ರಾತ್ರಿ ನೇರಳಕಟ್ಟೆ ಸಹೋದರಿ ಮನೆಗೆ ತೆರಳಿದ್ದು, ಬೈಕ್ ಸವಾರಿಗೆ ರಸ್ತೆಯಲ್ಲಿ ನಿಂತಿದ್ದು, ಶಾಮಿಯಾನ ಲಾರಿ ಕಾಣಿಸಿದೆ ಡಿಕ್ಕಿಯಾಗಿದೆ. ಹೆದ್ದಾರಿಯಲ್ಲೇ ಲಾರಿಯನ್ನು ಯಾವುದೇ ಎಚ್ಚರಿಕೆ ಸೂಚನೆಯಿಲ್ಲದೆ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆಯಿಂದ ತೀವ್ರ ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.