ಯಲ್ಲಾಪುರ/Accident: ತರಕಾರಿ, ಹಣ್ಣು ತುಂಬಿದ ಲಾರಿ ಪಲ್ಟಿಯಾಗಿ 9 ಜನರು ಮೃತಪಟ್ಟ ಘಟನೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಹಾವೇರಿ ಕಡೆಯಿಂದ ಕುಮಟಾದ ಸಂತೆಗೆ ತೆರಳಯವಾಗ ಘಟನೆ ನಡೆದಿದೆ. 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ.
ಮೃತರೆಲ್ಲರೂ ಹಾವೇರಿಯ ಸವಣೂರಿನವರೆಂದು ಹೇಳಲಾಗುತ್ತಿದೆ. ತರಕಾರಿ, ಹಣ್ಣು ತುಂಬಿಕೊಂಡು ಕುಮಟಾದ ಸಂತೆಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಗಾಯಗೊಂಡಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: https://www.vijayavani.net/tirumalas-srivari-gets-a-new-item-on-anna-prasadam-menu