ಕೂಡ್ಲಿಗಿ: ಜನರಲ್ಲಿರುವ ಮೌಢ್ಯವನ್ನು ಅಳಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಪಾಲಕರ ಪಾತ್ರ ದೊಡ್ಡದು
ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಭಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಬುಧವಾರ ಮಾತನಾಡಿದರು.
ಅತಿ ಹಿಂದುಳಿದ ತಾಲೂಕಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಕುಂಠಿತವಾಗಿದೆ. ಹೀಗಾಗಿ ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಹಾಗೂ ಮೂಢ ನಂಬಿಕೆಗಳು ಜೀವಂತವಾಗಿವೆ. ತಾಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ಆಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಆದ್ದರಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದು, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣ ಸೇರಿ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯ ಒದಗಿಸಲು ಬಹುಪಾಲು ಅನುದಾನ ನೀಡಿರುವುದಾಗಿ ತಿಳಿಸಿದರು.
ಪ್ರಮುಖರಾದ ಹಡಗಲಿ ವೀರಭದ್ರಪ್ಪ, ಟೋಪಿ ಸುರೇಶ್, ಬಿ.ಕೆ.ರಾಘವೇಂದ್ರ, ಕಾಟೇರ ಹಾಲೇಶ್, ಸುನೀಲ್ ಗೌಡ, ಬಾಲರಾಜ್, ಡಿ.ಎಚ್.ದುರುಗೇಶ್, ಪಿ.ಪ್ರಶಾಂತ, ಜಿಲಾನ್, ಕುಮಾರಸ್ವಾಮಿ, ಉಪನ್ಯಾಸಕರಾದ ಕಲ್ಲಪ್ಪ, ಉಮೇಶ್, ಅನಿಲ್ ಕುಮಾರ್ ಇದ್ದರು.