ತೇರದಾಳ: ಪಟ್ಟಣದ ವಿಶೇಷ ತಹಸೀಲ್ದಾರ್ ಕಚೇರಿಗೆ ಶನಿವಾರ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಭೇಟಿ ನೀಡಿ ಕಚೇರಿ ಕಟ್ಟಡ ವೀಕ್ಷಿಸಿದರು.
ಈಗಾಗಲೇ ತೇರದಾಳ ತಾಲೂಕು ಆಡಳಿತಕ್ಕೆ ಬೇಕಾಗುವ ತಹಸೀಲ್ದಾರ್ ಹುದ್ದೆಗೆ ಗ್ರೇಡ್-2 ಹುದ್ದೆ ಸೇರಿ ಶಿರಸ್ತೆದಾರ-1, ಎಫ್‌ಡಿಇ-2, ಆಪರೇಟರ್-1, ಸಿಪಾಯಿ-2 ಹುದ್ದೆಗಳು ಮಂಜೂರಾಗಿದ್ದು, ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಹೀಗಾಗಿ ಕಚೇರಿ ಕಟ್ಟಡ ದುರಸ್ತಿಗೊಳಿಸುವ ಹಿನ್ನೆಲೆಯಲ್ಲಿ ಪರಿಶೀಲಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುವ ಪೂರ್ವಸಿದ್ಧತೆ ಕಾರ್ಯ ನಡೆಯಿತು ಎಂದು ತಿಳಿದುಬಂದಿದೆ.
ವಿಶೇಷವಾಗಿ ರಿಕಾರ್ಡ್ ರೂಮ್‌ಗೆ ಬೇಕಾದ ನೂತನ ಕಂಪಾರ್ಟರ್(ಲಾಕರ್ ಸಿಸ್ಟ್‌ಂ)ನ್ನು ವೀಕ್ಷಿಸಿ, ಸೂಕ್ತ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಶಿರಸ್ತೆದಾರ ಮಿರಜಕರ ಇತರರಿದ್ದರು.
ಟಿಡಿಎಲ್ 25-1ಎ
ತೇರದಾಳ ಪಟ್ಟಣದ ವಿಶೇಷ ತಹಸೀಲ್ದಾರ್ ಕಟ್ಟಡದ ಸ್ಥಿತಿಯನ್ನು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ವೀಕ್ಷಿಸಿದರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ ಇದ್ದರು.