More

    ಜೆಎನ್​ಯು ಹಿಂಸಾಚಾರದ ಹಿಂದೆ ಎಡಪಂಥೀಯರ ಕೈವಾಡ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇರ ಆರೋಪ

    ನವದೆಹಲಿ: ಜವಾಹರಲಾಲ್ ನೆಹರು ವಿವಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಡಪಂಥೀಯರ ಕೈವಾಡ ಇದೆ ಎಂದು ದೇಶದ ಮುಂಚೂಣಿ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇರವಾಗಿ ಆರೋಪಿಸಿದೆ.

    ಎಬಿವಿಪಿಯ ಜೆಎನ್​ಯು ಘಟಕದ ಕಾರ್ಯದರ್ಶಿ ಮನೀರ್ಶ ಜಾನ್​ಗಿಡ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂಘಟಿತ ಮಾದರಿಯಲ್ಲಿ ಎಡಪಂಥೀಯ ಕಾರ್ಯಕರ್ತರು ಈ ದಾಳಿಯನ್ನು ನಡೆಸಿದ್ದಾರೆ. ಮುಖಕ್ಕೆ ಮಾಸ್ಕ್​ ಧರಿಸಿ ದಾಳಿ ನಡೆಸಿದವರ ನೇತೃತ್ವವನ್ನು ಜೆಎನ್​ಯು ಸ್ಟೂಡೆಂಟ್ಸ್​ ಯೂನಿಯನ್​(ಜೆಎನ್​ಯುಎಸ್​ಯು) ಅಧ್ಯಕ್ಷ ಐಷೆ ಘೋಷ್​ ವಹಿಸಿಕೊಂಡಿದ್ದರು.

    ಈ ಗುಂಪು ಕಾವೇರಿ ಹಾಸ್ಟೆಲ್​ ಕಡೆಗೆ ಮುನ್ನುಗ್ಗಿ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ಕಾರಣ, ನಾನು ಮತ್ತು ನನ್ನ ಗೆಳೆಯರು ಪೆರಿಯಾರ್ ಹಾಸ್ಟೆಲ್​ನಲ್ಲಿ ಅವಿತುಕೊಂಡಿದ್ದೆವು. ಮುಖಕ್ಕೆ ಮಾಸ್ಕ್​ ಧರಿಸಿದ್ದವರ ಕೈನಲ್ಲಿ ಲಾಠಿಗಳಿದ್ದವು. ಅವರು ಎಬಿವಿಪಿ ಕಾರ್ಯಕರ್ತರಿದ್ದ ರೂಮುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ರೂಮುಗಳನ್ನು ಹಾನಿಗೆಡುವುತ್ತಿದ್ದರು. ನಾನು ಅವರಿಂದ ತಪ್ಪಿಸಿಕೊಂಡು ಓಡಲೆತ್ನಿಸಿದಾಗ ನನ್ನ ಮೇಲೂ ಅವರು ಲಾಠಿಯಿಂದ ಹಲ್ಲೆ ನಡೆಸಿದ್ದರು. ಆ ಹಲ್ಲೆಯ ಆಘಾತಕ್ಕೆ ನಾನು ಅರಿವು ತಪ್ಪಿ ಬಿದ್ದು ಬಿಟ್ಟಿದ್ದೆ. ಈ ದಾಳಿ ಭಾನುವಾರ ಸಂಜೆ 3.30-4 ಗಂಟೆ ಅವಧಿಯಲ್ಲಿ ಆಗಿತ್ತು ಎಂದು ಮನೀಷ್ ವಿವರಿಸಿದ್ದಾರೆ.

    ಎಡಪಂಥೀಯರ ಈ ದಾಳಿಯಿಂದಾಗಿ ನಾನು ಮೂಳೆ ಮುರಿದುಕೊಂಡಿದ್ದಲ್ಲದೆ, ಫೋನ್​ಗಳನ್ನೂ ಕಳೆದುಕೊಂಡೆವು. ಹೀಗಾಗಿ ಏಮ್ಸ್​ಗೆ ಹೋದಾಗ ಯಾರನ್ನೂ ಸಂಪರ್ಕಿಸುವುದು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts