ಯುಎಇ ಜತೆ ಐದು ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ಮೋದಿ ಅಂಕಿತ

<< ಇಸ್ಲಾಂ ರಾಷ್ಟ್ರದಲ್ಲಿ ದೇವಾಲಯ ಶಿಲಾನ್ಯಾಸ, ತ್ರಿವರ್ಣ ಬಣ್ಣಕ್ಕೆ ತಿರುಗಿದ ದುಬೈ ಕಟ್ಟಡಗಳು >>

ಅಬುದಾಬಿ: ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್‌ ಅರಬ್‌ ಎಮರೈಟ್ಸ್‌ (ಯುಎಇ) ಜತೆ ಐದು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ.

ಅಬುದಾಬಿ ರಾಜ ಮೊಹಮ್ಮದ್‌-ಬಿನ್-ಜಾಯೇದ್‌ ಪ್ರಧಾನಿ ಮೋದಿಗೆ ಭಾನುವಾರ ಭವ್ಯ ಸ್ವಾಗತ ಕೋರಿದರು. ನಂತರ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚೆ ನಡೆಸಲಾಯಿತು. ಇಂಧನ ಶಕ್ತಿ, ರೈಲ್ವೆ, ಮಾನವ ಸಂಪನ್ಮೂಲ ಹಾಗೂ ಹಣಕಾಸು ವಲಯಕ್ಕೆ ಸಂಬಂಧಿಸಿ ಐದು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು.

ಯುಎಇನಲ್ಲಿ ದೇವಾಲಯ ಶಿಲಾನ್ಯಾಸ

ಮುಸ್ಲಿಂ ರಾಷ್ಟ್ರ ಯುಎಇಯಲ್ಲಿ ಮೊದಲ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ದುಬೈನಲ್ಲಿ ವಿಶ್ವ ಸರ್ಕಾರಿ ಸಮ್ಮೇಳನ ಉದ್ದೇಶಿಸಿ ಮಾತನಾಡುವರು. ಸಂಜೆ ವೇಳೆ ಒಮನ್‌ಗೆ ಭೇಟಿ ನೀಡಲಿದ್ದಾರೆ.

ತ್ರಿವರ್ಣ ಬಣ್ಣಕ್ಕೆ ತಿರುಗಿದ ದುಬೈ ಕಟ್ಟಡಗಳು

ಜಗತ್ತಿನ ಅತೀ ಎತ್ತರದ ಕಟ್ಟಡ ದುಬೈನ್​ ಬುರ್ಜ್ ಖಲೀಫಾ ತ್ರಿವರ್ಣ ಬಣ್ಣದೊಂದಿಗೆ ಕಂಗೊಳಿಸುತ್ತಿದೆ. ಮೋದಿ ಅವರನ್ನು ಸ್ವಾಗತಿಸುವ ಉದ್ದೇಶದಿಂದ 828 ಮೀಟರ್ ಎತ್ತರದ ಕಟ್ಟಡ ಬುರ್ಜ್ ಖಲೀಫಾ, ತೈಲ ಕಂಪೆನಿ ಅಬುಧಾಬಿ ನ್ಯಾಶನಲ್ ಆಯಿಲ್ ಕಂಪೆನಿ ಸೇರಿ ಹಲವು ಕಟ್ಟಡಗಳು ಭಾರತದ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿವೆ. ಇದು ನೋಡುಗರ ಕಣ್ಮನ ಸೆಳೆಯುತ್ತಿದೆ.

‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೇನ್​​’

ಇನ್ನೂ ಇದಕ್ಕೂ ಮುನ್ನ ನಿನ್ನೆ ಪ್ಯಾಲೆಸ್ತೈನ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರುಸ್ಥಾಪನೆ ಆಶಯ ವ್ಯಕ್ತಪಡಿಸಿದರು. ಮೊದಲ ಬಾರಿಗೆ ಪ್ಯಾಲೇಸ್ತೈನ್‌ಗೆ ಭೇಟಿ ನೀಡಿದ ಭಾರತದ ಪ್ರಧಾನಿಗೆ ಅಧ್ಯಕ್ಷ ಮೊಹಮ್ಮದ್‌ ಅಬ್ಬಾಸ್‌, ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೇನ್​​’ ಪ್ರಶಸ್ತಿ ನೀಡಿ ಗೌರವಿಸಿದರು.

Leave a Reply

Your email address will not be published. Required fields are marked *