ಆಲ್ದೂರು: ಗ್ರಾಮಸಭೆಗೆ ಕಂದಾಯ, ಸಾಮಾಜಿಕ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಪ್ರಮುಖ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಸಭೆಯನ್ನು ಅರ್ಥಕ್ಕೆ ನಿಲ್ಲಿಸಲಾಯಿತು.
ಬೆಳಗ್ಗೆ ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ಜಯಶೀಲಾ ಅಧ್ಯಕ್ಷತೆಯಲ್ಲಿ ಆರಂಭವಾದ ಗ್ರಾಮ ಸಭೆಗೆ ನಿಗದಿಮಾಡಲಾಗಿತ್ತು. ಆದರೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಅಪಸ್ವರ ಆರಂಭವಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಸೀಮಾ ಮಾತನಾಡಿ, ಬಾಲ್ಯವಿವಾಹ ನಡೆಯುತ್ತಿರುವ ಪ್ರಕರಣಗಳು ಗಮನಕ್ಕೆ ಬಂದರೆ ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಆಂಗನವಾಡಿಗಳಿಗೆ ಮಾಹಿತಿ ನೀಡಿ ಎಂದರು. ಆಲ್ದೂರಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸ್ಥಳಾವಕಾಶದ ಕೊರತೆ ಇದೆ. ಎರಡು ಎಕರೆ ಜಾಗ ನೀಡಿದರೆ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಬಹುದು. ಇಳೇಖಾನ್‌ನಲ್ಲಿ ಆರೋಗ್ಯ ಸಮುದಾಯ ಕೇಂದ್ರ ಸೋರುತ್ತಿದ್ದು, ಅದನ್ನು ದುರಸ್ತಿ ಮಾಡಬೇಕು ಎಂದು ಮನವಿ ನೀಡಲಾಗಿದೆ ಎಂದು ಆರೋಗ್ಯ ಸಮುದಾಯ ಅಧಿಕಾರಿ ಶಿವಕುಮಾರ್ ಸಭೆ ಗಮನಕ್ಕೆ ತಂದರು.
ಗ್ರಾಪಂ ಸದಸ್ಯ ನವರಾಜ್ ಮಾತನಾಡಿ, ಆಲ್ದೂರಿನ ಮಹಿಳಾ ಸಮಾಜ ಕಟ್ಟಡವನ್ನು ಕಂದಾಯ ಇಲಾಖೆಗೆ ಕರ್ತವ್ಯ ನಿರ್ವಹಿಸಲು ನೀಡಲಾಗಿತ್ತು. ಆದರೆ ಈಗ ಆವರು ಇದು ನಮ್ಮದೇ ಕಟ್ಟಡ ಎಂದು ಪಂಚಾಯತಿಗೆ ಬಿಟ್ಟುಕೊಡುತ್ತಿಲ್ಲ. ಆದ್ದರಿಂದ ಇಳೇಖಾನ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ನಿಮ್ಮ ಇಲಾಖೆ ಆನುದಾನದಿಂದಲೇ ದುರಸ್ತಿಪಡಿಸಿಕೊಳ್ಳಿ ಎಂದರು.
ಶಾಸಕರು, ಆರೋಗ್ಯ ಸಚಿವರು ಮಾಡಬೇಕಾದ ಕೆಲಸವನ್ನು ಗ್ರಾಪಂ ನವರು ಮಾಡಲು ಸಾಧ್ಯವಿಲ್ಲ. 16ನೇ ಹಣಕಾಸಿನಲ್ಲಿ 1.6 ಲಕ್ಷ ಮಾತ್ರ ಆನುದಾನ ನೀಡಿದ್ದು , ಇದರಿಂದ ಆಭಿವೃದ್ಧಿ ಸಾಧ್ಯವಿಲ್ಲ . ಮೂಲ ಸೌಕರ್ಯಗಳನ್ನು ನೀಡಲು ಅವಕಾಶವಿದ್ದರೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗ್ರಾಮ ಸಭೆಗಳಿಗೆ ಜಿಲ್ಲೆ ಹಾಗೂ ತಾಲೂಕು ಕರೆಸಿ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೋಬಳಿ ಮಟ್ಟದ ಅಧಿಕಾರಿಗಳಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನಾವು ಇಂದಿನ ಕೆಲಸ ಬಿಟ್ಟು ಗ್ರಾಮ ಸಭೆಗೆ ಬಂದಿದ್ದೇವೆ ಎಲ್ಲ ಇಲಾಖೆ ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಗ್ರಾಪಂ ನವರು ಸೂಕ್ತ ಕ್ರಮವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪುರ, ಸಂತೆ ಮೈದಾನ ವಾಸಿ ಕೃಪಾಕ್ಷ ಒತ್ತಾಯಿಸಿರು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ್, ಕೃಷಿ ಇಲಾಖೆ ಅಧಿಕಾರಿ ಇಂದ್ರಕುಮಾರ್, ಉಪಾಧ್ಯಕ್ಷ ಲಿಂಗೇಗೌಡ, ಪಿಡಿಒ ಗಂಗಾಧರಯ್ಯ ಇದ್ದರು.
ಅಧಿಕಾರಿಗಳ ಗೈರು, ಗ್ರಾಮಸಭೆ ಅರ್ಥಕ್ಕೆ ಮೊಟಕು
ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್ ಕ್ಲೀನ್ ಆಗಿಬಿಡುತ್ತೆ! Stomach problems
ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…
Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು
ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…
ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ
ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…