More

    ಆಸ್ಟ್ರೇಲಿಯಾದಲ್ಲಿ 10,000 ಒಂಟೆಗಳನ್ನು ಕೊಲ್ಲಲು ನಿರ್ಧಾರ; ವೃತ್ತಿಪರ ಶೂಟರ್​ಗಳಿಗೆ ಹೆಲಿಕಾಪ್ಟರ್​​ಗಳನ್ನು ಕಳಿಸಿಕೊಡಲಿರುವ ಸರ್ಕಾರ !

    ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಒಂಟೆಗಳ ಜೀವಕ್ಕೆ ಕುತ್ತು ತಂದಿದೆ. ದೇಶದ ನ್ಯೂ ಸೌತ್​ ವೇಲ್ಸ್​ ಪ್ರದೇಶ ಸೇರಿ ಹಲವೆಡೆ ಬೆಂಕಿ ಜ್ವಾಲೆ ಅರಣ್ಯವನ್ನು, ಪ್ರಾಣಿಗಳನ್ನು, ಮನುಷ್ಯರನ್ನು ಬಲಿ ಪಡೆದಿದೆ. ಬೆಂಕಿ ನಂದಿಸಲು ಸಾಧ್ಯವಾಗದಷ್ಟು ಅದರ ಭೀಕರತೆ ಆವರಿಸಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಬೆಂಕಿ ತಗ್ಗಿಸಲು ಸಾಧ್ಯವಾಗುತ್ತಿಲ್ಲ.

    ಆದರೆ ಈಗ ಆಸ್ಟ್ರೇಲಿಯಾ ಸರ್ಕಾರ ಬೆಟ್ಟ ಪ್ರದೇಶಗಳಲ್ಲಿರುವ ಒಟ್ಟು 10,000 ಒಂಟೆಗಳನ್ನು ಇನ್ನು ಐದು ದಿನಗಳಲ್ಲಿ ಕೊಲ್ಲಲು ನಿರ್ಧರಿಸಿದೆ. ಆ ಕಾರ್ಯ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಒಂಟೆಗಳನ್ನು ಕೊಲ್ಲಲೆಂದೇ ವೃತ್ತಿಪರ ಶೂಟರ್​ಗಳಿಗೆ ಸರ್ಕಾರ ಹೆಲಿಕಾಪ್ಟರ್​ಗಳನ್ನು ಕಳಿಸಲಿದೆ ಎನ್ನಲಾಗಿದೆ.

    ಒಂಟೆಗಳು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ ಎನ್ನಲಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಈಗಾಗಲೇ ಹೆಚ್ಚಾಗಿದೆ. ಬೆಂಕಿಯ ಜ್ವಾಲೆಯೂ ಹೆಚ್ಚುತ್ತಲೇ ಇದೆ. ಈ ಒಂಟೆಗಳು ಮನೆಗಳಿಗೆ ಬಂದು ಅಳವಡಿಸಲಾದ ಏರ್​ಕಂಡೀಶನ್​ಗಳ ನೀರನ್ನೂ ಕುಡಿದು ಹೀರುತ್ತವೆ. ಸುತ್ತಮುತ್ತ

    ಎಲ್ಲೇ ನೀರಿದ್ದರೂ ಅದನ್ನು ಖಾಲಿ ಮಾಡುತ್ತವೆ ಎಂದು ಹಲವರು ಸರ್ಕಾರಕ್ಕೆ ದೂರು ನೀಡಿದ್ದಾರಂತೆ.
    ದಕ್ಷಿಣ ಆಸ್ಟ್ರೇಲಿಯಾದಲ್ಲಿ ಒಂಟೆಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಇವುಗಳಿಂದಲೇ ನೀರಿನ ಅಭಾವ ಉಂಟಾಗಿರುವುದು. ಅದರಲ್ಲೂ ಆದಿವಾಸಿ ಜನರಿಗೆ ಒಂಟೆಗಳಿಂದ ತೀವ್ರ ಸಮಸ್ಯೆಯಾಗುತ್ತಿದೆಯಂತೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts