ಮದ್ದೂರಲ್ಲಿ ಅಭಿಷೇಕ್ ಗೌಡ ಪ್ರಚಾರ: ನಮಗೆ ಜೆಡಿಎಸ್ ಸೇರಿ ಎಲ್ಲ ಪಕ್ಷದ ಬೆಂಬಲ ಇದೆ

ಮದ್ದೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರ ಪರವಾಗಿ ಪುತ್ರ ಅಭಿಷೇಕ್ ಗೌಡ ಮದ್ದೂರಿನ ವೈದ್ಯನಾಥಪುರದಿಂದ ಪ್ರಚಾರ ಆರಂಭಿಸಿ ಮತಯಾಚನೆ ಮಾಡಿದರು.

ವೈದ್ಯನಾಥೇಶ್ವರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, ನಮಗೆ, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷದವರ ಬೆಂಬಲ ಇದೆ. ಯಶ್, ದರ್ಶನ್ ಝೀರೋದಿಂದ ಬಂದವರು. ಅವರ ಬಗ್ಗೆ ಹಗುರವಾಗಿ‌ ಮಾತನಾಡುವುದು ಸರಿಯಲ್ಲ. ನಿಖಿಲ್​ಗೆ ಬ್ಯಾಕ್ ಗ್ರೌಂಡ್ ಇದೆ. ಅವರಿಗೆ ಇರಲಿಲ್ಲ. ಕಷ್ಟ ಪಟ್ಟು ಮೇಲೆ ಬಂದವರು ಎಂದರು.

ಎಲ್ಲ ಕಡೆ ರೆಸ್ಪಾನ್ಸ್ ಚೆನ್ನಾಗಿ ಇದೆ. ಜನರು ಗೆಲ್ಲಿಸುತ್ತೇವೆ ಅಂತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ಜನರು ತೀರ್ಮಾನ ಮಾಡಲಿ. ನಾನು ಸೋಷಿಯಲ್ ಮೀಡಿಯ ಅಷ್ಟೊಂದು ನೋಡುವುದಿಲ್ಲ. ತಾಯಿ ಹೇಳಿದ್ದಾರೆ ಅಂದರೆ ಗಂಭೀರ ವಿಚಾರ ಇರುತ್ತದೆ. ಸೋಷಿಯಲ್ ಮೀಡಿಯಾ ನೋಡೋಕೆ ಟೈಂ ಇಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ನಮ್ಮ ಸ್ಪರ್ಧೆ ಬಗ್ಗೆ ಜೆಡಿಎಸ್​ಗೆ ಯಾಕೆ ಯೋಚನೆ ಎಂದು ಪ್ರಶ್ನಿಸಿದರು.