ಫಸ್ಟ್ ಹಾಫ್ ನೋಡಿ ಬದುಕೋತಿಯಾ ಬಿಡ್ಲಾ ಎಂದು ಅಂಬರೀಷ್‌ ಮಗ ಅಭಿಷೇಕ್‌ಗೆ ಹೇಳಿದ್ರಂತೆ!

ಬೆಂಗಳೂರು: ಎಲೆಕ್ಷನ್ ರಿಸಲ್ಟ್ ಬಗ್ಗೆ ನರ್ವಸ್ ಆಗಿಲ್ಲ. ನಾನು ಬೇರೆಯವರ ರೀತಿ, ನಾವು ಗೆದ್ದೇ ಗೆಲ್ತೀವಿ ಎಂದೆಲ್ಲ ಹೇಳಲ್ಲ. ಬದಲಾಗಿ ರಿಸಲ್ಟ್ ಬಗ್ಗೆ ಕ್ಯೂರಿಯಸ್ ಆಗಿದೀನಿ‌ ಎಂದು ನಟ ಅಭಿಷೇಕ್‌ ಅಂಬರೀಶ್‌ ತಿಳಿಸಿದರು.

ಅಮರ್‌ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 31 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ನನಗೆ ಸಾವಿರಾರು ವೀಕ್‌ನೆಸ್‌ ಇದೆ. ಅದರಲ್ಲಿ ವಾಕಿಂಗ್ ಸ್ಟೈಲ್ ಕೂಡ ಒಂದು. ನಮ್ ನಿರ್ದೇಶಕರು ಅದೆಲ್ಲವನ್ನೂ ಬದಲಾಯಿಸಿದ್ದಾರೆ. ಸಿನಿಮಾದಲ್ಲಿ ಅಪ್ಪನ ಸ್ಟೈಲ್ ಅತಿಯಾಗಿ ಇರುವುದಿಲ್ಲ. ಬದಲಾಗಿ ಪಾತ್ರದಲ್ಲಿ ಚೇಂಜಸ್ ಇದೆ. ನಮ್ಮ ತಂದೆ ಮೇಲಿನ ಪ್ರೀತಿಯಿಂದ ರಜಿನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ನಟಿಸುವುದಾಗಿ ಹೇಳಿದ್ದರು. ರಜಿನಿಕಾಂತ್ ಭಿಕ್ಷುಕನ ಪಾತ್ರವಾದರೂ ಮಾಡ್ತೀನಿ ಎಂದಿದ್ದರಂತೆ ಎಂದರು.

ಅಪ್ಪ ಫಸ್ಟ್ ಹಾಫ್ ನೋಡಿ ಬದುಕೋತಿಯಾ ಬಿಡ್ಲಾ ಎಂದು ಹೇಳಿದ್ರು. ಆದರೆ ನನ್ನ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಎಂದು ಅಪ್ಪ ಯಾವಾಗಲೂ ಟೀಕೆ ಮಾಡುತ್ತಿರಲಿಲ್ಲ. ಬದಲಾಗಿ ಅಮ್ಮ ಎಲ್ಲವನ್ನೂ ಹೇಳುತ್ತಿದ್ದರು. ಮೊದಲ ದಿನದ ಶೂಟಿಂಗ್ ಕಷ್ಟ ಎನಿಸಿತ್ತು. ಎಷ್ಟೇ ತಯಾರಿ ನಡೆಸಿದ್ರು. ಮೊದಲ ಬಾರಿ ನರ್ವಸ್ ಆಗಿತ್ತು. ಸೆಕೆಂಡ್ ಟೈಂ ಭಯ ಆಗಿದ್ದು ಅಂದ್ರೆ ದರ್ಶನ್ ಬಂದ್ರೆ ಎನ್ನುವ ಭಯ ಇತ್ತು. ದರ್ಶನ್ ಒಂದೊಳ್ಳೆ ಮಾತು ಹೇಳಿದ್ರು. ಅಪ್ಪಾಜಿ ಜತೆಗೆ ನಟಿಸಿದ ಸಿನಿಮಾನಾ ನೆನಪಿಸಿಕೊಂಡಿದ್ದರು ಎಂದು ಹೇಳಿದರು.‌

ಸುಮಲತಾ ಅಂಬರೀಷ್‌ ಮಾತನಾಡಿ, ಧರ್ಮಸ್ಥಳದಲ್ಲಿ ಮಂಜುನಾಥ ಅಭಿಶೇಕಕ್ಕೂ ನೀರಿಲ್ಲ ಎಂದು ಹೇಳಿದ್ದು ತುಂಬಾ ಬೇಜಾರಾಗಿದೆ. ಸಮಸ್ಯೆ ಬಂದ ನಂತರ ಹುಡುಕುವುದಲ್ಲ. ಮೊದಲೇ ಪರಿಸರವನ್ನು ಕಾಪಾಡಬೇಕು. ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕು. ಸರ್ಕಾರ ಮೊದಲು ಇದಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರ, ಪ್ರಜೆ ಒಗ್ಗೂಡಿ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಸುಮಲತಾ ಅಂಬರೀಶ್ ಕೂಡ ತುಂಬಾ ಸಾಥ್ ಕೊಟ್ಟಿದ್ದಾರೆ. ಕಥೆಯಲ್ಲಿ ಎಲ್ಲಿಯೂ ಅವರು ಚೇಂಜಸ್ ಮಾಡಲಿಲ್ಲ. ಸಿನಿಮಾದ ಆರಂಭದಲ್ಲೇ ಅಂಬಿಯ ಡೈಲಾಗ್ ಇರಲಿದೆ. ಮೇ 31ರಂದು ಅಮರ್ ಸಿನಿಮಾ ರಿಲೀಸ್ ಆಗಲಿದೆ. 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. 85 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆದಿದೆ. ಮೇ 29 ಅಂಬರೀಶ್ ಅವ್ರ ಹುಟ್ಟುಹಬ್ಬವಿರುವುದರಿಂದ 31 ರಂದು ರಿಲೀಸ್ಗೆ ಪ್ಲ್ಯಾನ್‌ ಮಾಡಲಾಗಿದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *