ಹೊರ್ತಿ: ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರೂ ಸೌಹಾರ್ದದಿಂದ ಆಚರಿಸುವ ದೀಪಾವಳಿ ಹಬ್ಬ ಭಾವೈಕ್ಯದ ಸಂಕೇತವಾಗಿದೆ ಎಂದು ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.
ಗ್ರಾಮದ ಹಳೆಯ ರೇವಣಸಿದ್ಧೇಶ್ವರ ದೇವಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 8ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಹಬ್ಬಗಳು ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿವೆ ಎಂದರು.
ರೇವಣಸಿದ್ಧೇಶ್ವರ ದೇವಸ್ಥಾನ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಖೈನೂರ ಮಾತನಾಡಿ, ದೇವರ ಪ್ರತಿರೂಪವಾದ ದೀಪ ಆತ್ಮಶಕ್ತಿ ಹೆಚ್ಚಿಸಿ ಸಕಲ ಸಂಪತ್ತು ನೀಡುತ್ತದೆ ಎಂದರು.
ಅಥರ್ಗಾದ ಮುರುಘೇಂದ್ರ ಸ್ವಾಮಿಗಳು ಮಾತನಾಡಿದರು. ವಿವಿಧ ಶ್ರೀಗಳು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು. ಗಣ್ಯರು, ಭಕ್ತರು ದೀಪ ಬೆಳಗಿದರು.
ಗುರಪ್ಪ ಪೂಜಾರಿ, ಶಂಕರ ರಾಠೋಡ, ಅಣ್ಣಪ್ಪಗೌಡ ಪಾಟೀಲ, ಶ್ರೀಮಂತ ಇಂಡಿ, ಸಂಗಪ್ಪ ದುರ್ಗದ, ಅಮಸಿದ್ದಗೌಡ ಲೋಣಿ, ಸಂಗಪ್ಪ ಭೋಸಗಿ, ಶಿವಪುತ್ರ ಲೋಣಿ, ಅಶೋಕ ಗಡ್ಡದ, ಶ್ರೀಶೈಲ ಶಿವೂರ, ಸಂಗಪ್ಪ ಕಡಿಮನಿ, ಅವ್ವಣ್ಣ ತೇಲಿ, ಶಿವಾನಂದ ಮೇತ್ರಿ, ಬಸವರಾಜ ಜಂಬಗಿ ಇತರರಿದ್ದರು.