ಅಭಾಸಾಪ 4ನೇ ಅಧಿವೇಶನ ಜೂ 7ರಿಂದ, ಬಾಗಲಕೋಟೆ ಸಾಹಿತ್ಯ ಸಾಧಕ ಎಸ್.ಜಿ. ಕೋಟಿ ಅಧ್ಯಕ್ಷ

blank

ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ನಾಲ್ಕನೆಯ ಅಧಿವೇಶನವು ಜೂ. 7 ಮತ್ತು 8ರಂದು ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ನಡೆಯಲಿದ್ದು, ಅಧ್ಯಕ್ಷರಾಗಿ ಬಾಗಲಕೋಟೆಯ ಸಾಹಿತ್ಯ ಸಾಧಕ ಎಸ್.ಜಿ. ಕೋಟಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಹೇಳಿದರು.

blank

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ರಾಜ್ಯದೆಲ್ಲೆಡೆಯ ಒಂದು ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಅಧಿವೇಶನ ‘ಸಾಹಿತ್ಯದಲ್ಲಿ ಸ್ವತ್ವ’ ಎಂಬ ವಿಷಯದ ಮೇಲೆ ನಡೆಯಲಿದೆ. ಸ್ವಂತಿಕೆ, ತನ್ನತನ, ಸ್ವಗುಣ ಇತ್ಯಾದಿ ಧ್ವನಿಗಳನ್ನು ಬಿಂಬಿಸುವ ಸ್ವತ್ವವು, ಸಾಹಿತ್ಯದಲ್ಲಿ ಹೇಗೆ ಬಿಂಬಿತವಾಗಿದೆ ಮತ್ತು ಹೇಗೆ ಬಿಂಬಿತವಾಗಬೇಕು ಎಂಬ ವಿವರಗಳು ಅಧಿವೇಶನದಲ್ಲಿ ರ್ಚಚಿತವಾಗಲಿದೆ.

ಜೂನ್ 7ರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಅಧಿವೇಶನವನ್ನು ಸಾಹಿತಿ, ಚಿಂತಕ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರೊ. ಪ್ರೇಮಶೇಖರ್ ಉದ್ಘಾಟಿಸಲಿದ್ದಾರೆ. ಅಧಿವೇಶನದ ವಿಷಯದ ಮೇಲೆ ’ಅಭಾಸಾಪ’ದಿಂದ ಪ್ರಕಟಗೊಳ್ಳುವ ಪುಸ್ತಕವನ್ನು ವಚನ ಸಾಹಿತ್ಯದ ವಿದ್ವಾಂಸ ಡಾ. ಸಂಗಮೇಶ್ವರ ಸವದತ್ತಿಮಠ ಬಿಡುಗಡೆ ಮಾಡಲಿದ್ದಾರೆ ಎಂದರು.

ಅಧಿವೇಶನದ ಮೊದಲನೆಯ ದಿನ ಚರ್ಚೆಯ ಸ್ವರೂಪದ ವಿಚಾರಗೋಷ್ಠಿ ನಡೆಯಲಿದ್ದು, ಇದರಲ್ಲಿ ಡಾ. ಜಿ.ಬಿ. ಹರೀಶ, ಸಹನಾ ವಿಜಯಕುಮಾರ್, ದೀಪಾ ಜೋಷಿ, ಬೇಳೂರು ಸುದರ್ಶನ ಹಾಗೂ ನೀತಾ ರಾವ್ ಭಾಗವಹಿಸಲಿದ್ದಾರೆ. ಈ ಅವಧಿಯ ಸಮನ್ವಯಕಾರರಾಗಿ ರೋಹಿತ್ ಚಕ್ರತೀರ್ಥ ಅವರು ಕಾರ್ಯನಿರ್ವಹಿಸಲಿದ್ದಾರೆ. ಅಂದು ಸಂಜೆ ಆರರಿಂದ ಎಂಟು ಗಂಟೆಯವರೆಗೆ ’ಸ್ವ’ತ್ವದ ಮೇಲೆ ಹರಟೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಗುಂಡೂರಾವ್, ವಿ.ಬಿ. ಆರತಿ, ಗಂಗಾವತಿ ಪ್ರಾಣೇಶ ಹಾಗೂ ಎಂ. ಎಸ್. ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ. ಈ ಅವಧಿಯನ್ನು ಚಕ್ರವರ್ತಿ ಸೂಲಿಬೆಲೆ ನಿರ್ವಹಿಸಲಿದ್ದಾರೆ ಎಂದರು.

ಎರಡನೆಯ ದಿನ ಬೆಳಗ್ಗೆ ’ಸ್ವ’ತ್ವದ ಮೇಲೆ ಕವಿಗೋಷ್ಠಿ ನಡೆಯಲಿದ್ದು, ರಾಜ್ಯದ ವಿವಿಧೆಡೆಗಳಿಂದ ಆಯ್ಕೆಯಾದ ಇಪ್ಪತ್ತು ಕವಿಗಳು ಕವನ ವಾಚನ ಮಾಡಲಿದ್ದಾರೆ. ಕೊನೆಯಲ್ಲಿ ಸಾಹಿತಿ, ಖ್ಯಾತ ಏಕವ್ಯಕ್ತಿ ತಾಳಮದ್ದಲೆ ಕಲಾವಿದರಾದ ದಿವಾಕರ ಹೆಗಡೆ ಕೆರೆಹೊಂಡ ಅವರು ವಾಚಿತ ಕವನಗಳ ಅವಲೋಕನ ಮಾಡಲಿದ್ದಾರೆ. ಅಧಿವೇಶನದ ಸಮಾರೋಪ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟಿ›ೕಯ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಪವನಪುತ್ರ ಬಾದಲ್ ಉಪಸ್ಥಿತರಿದ್ದು ಸಮಾರೋಪ ಭಾಷಣ ಮಾಡಲಿದ್ದಾರೆ. ಗದಗ ಹಾಗೂ ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ನಿರ್ಭಯಾನಂದ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.ಎರಡು ದಿನ ನಡೆಯುವ ಈ ಅಧಿವೇಶನದಲ್ಲಿ ಪುಸ್ತಕ ಮಾರಾಟದ ವ್ಯವಸ್ಥೆಯೂ ಇರುತ್ತದೆ. ಅಧಿವೇಶನದ ಸ್ವಾಗತ ಸಮಿತಿಯ ಉದ್ಘಾಟನೆಯು ಈಗಾಗಲೇ ನೆರವೇರಿದ್ದು ಅದರ ಗೌರವಾಧ್ಯಕ್ಷರಾಗಿ ಸಾಹಿತಿ ಪುಟ್ಟು ಕುಲಕರ್ಣಿ ಮತ್ತು ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ನಿಯುಕ್ತಿಯಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ, ಸದಸ್ಯೆ ಶೈಲಜಾ ಮಂಗಳೂರು ಇದ್ದರು.

 

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank