ಕಲ್ಪತರುವಿನಂತೆ ಬೆಳೆದ ಅಬ್ಬೆತುಮಕೂರ ಮಠ

ಯಾದಗಿರಿ: ಸಾಮಾಜಿಕ, ಧಾಮರ್ಿಕ, ಸಾಹಿತ್ಯಿಕ, ಸಾಂಸ್ಕೃತಿಕ ಜತೆಗೆ ಶೈಕ್ಷಣಿಕವಾಗಿಯೂ ಸಿದ್ದ ಸಂಸ್ಥಾನ ಮಠ ತನ್ನದೇ ಆದ ಖ್ಯಾತಿಯಿಂದ ಈ ನಾಡಿನಲ್ಲಿ ಅನೇಕ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ತಿಳಿಸಿದರು.

ಬುಧುವಾರದಂದು ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನ ಸಿದ್ಧಗಂಗಾ ಮಠದಂತೆ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠವೂ ಪ್ರವರ್ಧಮಾನಗೊಳ್ಳುತ್ತಿದೆ. ಸಿದ್ಧಗಂಗಾ ಮಠ ಡಾ.ಶಿವಕುಮಾರ ಸ್ವಾಮಿಗಳ ಕತರ್ೃತ್ವ ಶಕ್ತಿಯಿಂದ ಹೇಗೆ ಬೆಳೆದುನಿಂತಿದೆಯೋ ಹಾಗೇಯೇ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠವೂ ಕೂಡ ಡಾ. ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಅಲ್ಪ ಅವಧಿಯಲ್ಲಿಯೇ ಕಲ್ಪತರುವಿನಂತೆ ಬೆಳೆದು ನಿಂತಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ನಾಟಕ ಸಾಮಾಜಿಕ ಪರಿವರ್ತನೆಗೆ ಕಾರಣಿಭೂತವಾಗುತ್ತದೆ. ರಂಗ ಕಲಾವಿದರು ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬುವುದರ ಜತೆಗೆ ಜನತೆಗೆ ಉತ್ತಮವಾದ ಸಂದೇಶವನ್ನು ನೀಡುತ್ತಾರೆ. ಹೀಗಾಗಿ ನಾಟಕ ಜನರ ಬದುಕಿನ ಬದಲಾವಣೆಗೆ ಕಾರಣವಾಗುತ್ತದೆ ಎಂದು ಹೇಳಿದರು.

ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಶಶಿಧರರಡ್ಡಿ ಹೊಸಳ್ಳಿ, ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚನಾಳ ಇದ್ದರು. ಸಾಣೆಹಳ್ಳಿಯ ಶಿವ ಸಂಚಾರ ಕಲಾತಂಡದವರು ನಡೆಸಿಕೊಟ್ಟ ಗುರುಮಾತೆ ಅಕ್ಕನಾಗಲಾಂಬಿಕೆ ನಾಟಕ ಜನಮನ ಸೂರೆಗೊಂಡಿತು.