Friday, 16th November 2018  

Vijayavani

Breaking News

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಎಬಿ ಡಿವಿಲಿಯರ್ಸ್​

Wednesday, 23.05.2018, 5:26 PM       No Comments

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟ್ಸ್​ಮನ್​ ಅಬ್ರಹಾಂ ಡಿವಿಲಿಯರ್ಸ್​ ಅವರು ತಕ್ಷಣ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನಕ್ಕೆ ಬುಧವಾರ ನಿವೃತ್ತಿಯನ್ನು ಘೋಷಿಸಿದ್ದಾರೆ.

34 ವರ್ಷದ ಡಿವಿಲಿಯರ್ಸ್​ ನಿವೃತ್ತಿ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ಹೇಳುವ ಮೂಲಕ 14 ವರ್ಷದ ಸುದೀರ್ಘ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

ಒಟ್ಟಾರೆ 114 ಟೆಸ್ಟ್​ ಪಂದ್ಯಗಳು, 228 ಏಕದಿನ ಪಂದ್ಯಗಳು ಹಾಗೂ 78 ಟಿ20 ಪಂದ್ಯಗಳನ್ನಾಡಿರುವ ಡಿವಿಲಿಯರ್ಸ್​ ವೃತ್ತಿ ಜೀವನದ ಶ್ರೇಷ್ಠ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನು ಪ್ರಾಮಾಣಿಕವಾಗಿ ಆಟವಾಡಿದ್ದೇನೆ. ಸಾಕಷ್ಟು ದಣಿದಿದ್ದೇನೆ ಎಂದು ತಿಳಿಸಿದ್ದಾರೆ.

ಚೆನ್ನಾಗಿ ಆಡುತ್ತಿರುವಾಗಲೇ ನಿವೃತ್ತಿ ಘೋಷಿಸಿರುವುದು ಒಂದು ರೀತಿಯ ಕಠಿಣ ನಿರ್ಧಾರವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಸರಣಿ ಜಯಿಸಿದ ನಂತರ ನಿವೃತ್ತಿ ತೆಗೆದುಕೊಳ್ಳಲು ಇದೊಂದು ಸುಸಂದರ್ಭ ಎಂದು ಭಾವಿಸಿ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದಾರೆ.

ನನಗೆ ಬೆಂಬಲ ನೀಡಿದ ನನ್ನ ತಂಡ, ತರಬೇತುದಾರರು ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಸಂಸ್ಥೆಯ ಸಿಬ್ಬಂದಿಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಧನ್ಯವಾದ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top