ನರೇಗಲ್ಲ: ಸದ್ಗುರು ಶ್ರೀ ಬ್ರಹ್ಮ ಚೈತನ್ಯರ ಧರ್ಮಪತ್ನಿ ಸರಸ್ವತಿ ಬಾಯಿ ಅವರನ್ನು ಆಯೀ ಸಾಹೇಬ ಎಂದು ಕರೆಯಲಾಗುತ್ತದೆ. ಅವರ ಜೀವನ ನಮಗೆಲ್ಲರಿಗೂ ಆದರ್ಶ ಎಂದು ಅನಸುಯಾ ಮಹಿಳಾ ಮಂಡಳ ಸದಸ್ಯೆ ಸೀಮಾ ಕೊಂಡಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಝಿಸಿರುವ ಗುರು ಪ್ರತಿಪದೆ ಉತ್ಸವದ ಏಳನೇ ದಿನದ ಪಾಲಕಿ ಸೇವೆಯ ಚಿಂತನದಲ್ಲಿ ಅವರು ಮಾತನಾಡಿದರು.
ಗಂಡ-ಹೆಂಡತಿ ಹೇಗೆ ಅನೋನ್ಯವಾಗಿರಬೇಕು. ಇಬ್ಬರ ನಡುವಿನ ಹೊಂದಾಣಿಕೆ ಹೇಗಿದ್ದರೆ ಅವರ ಬಾಳು ಚೆಂದ ಇರುತ್ತದೆ ಎಂಬುದನ್ನು ಆಯೀ ಸಾಹೇಬರ ಬದುಕು ತಿಳಿಸಿಕೊಡುತ್ತದೆ. ಸದ್ಗುರು ಶ್ರೀ ಬ್ರಹ್ಮಚೈತನ್ಯರಂತಹ ದೈವೀ ಪುರುಷರ ಮಡದಿಯಾಗಿಯೂ ಅವರು ಸರಳ ಜೀವನ ನಡೆಸಿದರು ಎಂಬುದನ್ನು ಎಲ್ಲ ಹೆಣ್ಣು ಮಕ್ಕಳು ತಿಳಿಯಬೇಕು. ಸದ್ಗುರು ಶ್ರೀ ಬ್ರಹ್ಮ ಚೈತನ್ಯರನ್ನು ಮಹಾರಾಜರು ಎಂದೇ ಎಲ್ಲರೂ ಕರೆಯುತ್ತಿದ್ದರು. ಮಹಾರಾಜರಿಂದ ಉಪದೇಶ ಪಡೆದುಕೊಂಡ ಆಯೀ ಸಾಹೇಬರು ಶ್ರೀ ರಾಮನಾಮ ಸ್ಮರಣೆಯಿಂದಲೇ ತಮ್ಮ ಜೀವನ್ಮುಕ್ತಿ ಮಾಡಿಕೊಂಡಿರು. ಅಕಾಲಿಕವಾಗಿ ವೈಕುಂಠವಾಸಿಗಳಾದ ಸರಸ್ವತಿ ಬಾಯಿಯವರ ಜಾಗೆಯಲ್ಲಿ ಮಹಾರಾಜರು ಒಬ್ಬ ಕುರುಡ ಮಹಿಳೆಯನ್ನು ಮರುಮದುವೆಯಾದರು. ಅವರಿಗೂ ಶ್ರೀ ರಾಮನಾಮದ ಸಾಧನೆ ಮಾಡಲು ತಿಳಿಸಿ, ಅವರಿಂದಲೇ ಧನ ಕನಕಗಳನ್ನು ದಾನ ಮಾಡಿಸಿ, ಜೀವನದಲ್ಲಿ ಎಲ್ಲವೂ ನಶ್ವರ, ಶ್ರೀ ರಾಮನೊಬ್ಬನೆ ಶಾಶ್ವತ ಎಂಬುದನ್ನು ಜಗತ್ತಿಗೆ ತೋರಿಸಿದವರು ಮಹಾರಾಜರು. ಅಥವರ ಜೀವನ ಚರಿತ್ರೆ ನಮಗೆ ಪಾಠವಾಗಬೇಕು ಎಂದು ಸೀಮಾ ಹೇಳಿದರು.
ಶ್ರೀ ವಲ್ಲಭಭಟ್ಟ ಸದರಜೋಷಿ, ಎ.ಜಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಘುನಾಥ ಕೊಂಡಿ, ಮುಕುಂದಭಟ್ಟ ಸೂರಭಟ್ಟನವರ, ಅರುಣ ಕುಲಕರ್ಣಿ ಸುಮಂಗಲೆಯರು ಇದ್ದರು.