Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಐಪಿಎಲ್​ ಇತಿಹಾಸದಲ್ಲಿ 7 ತಂಡಗಳ ಪರ ಆಡಿದ ಏಕೈಕ ಆಟಗಾರ ಆ್ಯರನ್​ ಫಿಂಚ್​!

Monday, 16.04.2018, 10:01 AM       No Comments

ನವದೆಹಲಿ: ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಆ್ಯರನ್​ ಫಿಂಚ್​ ಅವರು ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್​ನಲ್ಲಿ ಏಳು ವಿವಿಧ ತಂಡಗಳ ಪರ ಆಡಿದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2010 ರಲ್ಲಿ ರಾಜಸ್ಥಾನ ರಾಯಲ್ಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ ಆ್ಯರನ್​ ಫಿಂಚ್​ ಅವರು ದೆಹಲಿ, ಪುಣೆ, ಹೈದರಾಬಾದ್​, ಮುಂಬೈ ಹಾಗೂ ಗುಜರಾತ್​ ಪರ ಆಡಿದ್ದಾರೆ. ಪ್ರಸ್ತುತ ಅವರು ಪಂಜಾಬ್​ ತಂಡದ ಪರ ಆಡುತ್ತಿದ್ದಾರೆ.

31 ವರ್ಷದ ಫಿಂಚ್​ ಅವರು ಟಿ20 ಮಾದರಿ ಪಂದ್ಯಗಳಲ್ಲಿ ವಿಶ್ವದ ಉತ್ತಮ ಆಟಗಾರನೆಂಬ ಖ್ಯಾತಿ ಗಳಿಸಿದ್ದಾರೆ. ಆಸ್ಟ್ರೇಲಿಯಾ ಪರ 36 ಟಿ20 ಪಂದ್ಯಗಳನ್ನಾಡಿರುವ ಫಿಂಚ್​ ವಯ್ಯಕ್ತಿಕ 156 ಗರಿಷ್ಠ ರನ್​ ದಾಖಲಿಸಿದ್ದಾರೆ.

ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಫಿಂಚ್​ ಅವರು 66 ಪಂದ್ಯಗಳನ್ನಾಡಿದ್ದಾರೆ. ವಯ್ಯಕ್ತಿಕವಾಗಿ 88 ಗರಿಷ್ಠ ರನ್​ ಹೊಂದಿದ್ದಾರೆ. 13 ಅರ್ಧ ಶತಕಗಳನ್ನು ಬಾರಿಸಿರುವ ಫಿಂಚ್​ ಅವರು 27.18 ರನ್​ ಸರಾಸರಿಯನ್ನು ಹೊಂದಿದ್ದಾರೆ.

ಐಪಿಎಲ್‌ನಲ್ಲಿ ಫಿಂಚ್‌ ಜರ್ನಿ
# 2010-ರಾಜಸ್ಥಾನ ರಾಯಲ್ಸ್‌
# 2011-2012-ಡೆಲ್ಲಿ ಡೇರ್‌ ಡೆವಿಲ್ಸ್‌‌
# 2013-ಪುಣೆ ವಾರಿಯರ್ಸ್‌‌
# 2014-ಸನ್‌‌ರೈಸರ್ಸ್‌‌ ಹೈದರಾಬಾದ್‌
# 2015- ಮುಂಬೈ ಇಂಡಿಯನ್ಸ್‌‌
# 2016-17-ಗುಜರಾತ್‌ ಲಯನ್ಸ್‌
# 2018-ಕಿಂಗ್ಸ್‌ ಇಲೆವೆನ್‌‌ ಪಂಜಾಬ್‌

Leave a Reply

Your email address will not be published. Required fields are marked *

Back To Top