ಅರಸೀಕೆರೆ: ತಾಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗಿದ ಆರತಿಬಾನ ಕಾರ್ಯಕ್ರಮ ಮಂಗಳವಾರ ತಡರಾತ್ರಿ ಸಂಪನ್ನಗೊಂಡಿತು.
ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಗ್ರಾಮದ ಆರಾಧ್ಯ ದೈವ ರಂಗನಾಥ ಸ್ವಾಮಿ, ಗ್ರಾಮ ದೇವತೆಗಳಾದ ಹೊಂಗ್ಯಮ್ಮ, ಮಲ್ಲಿಗೆಮ್ಮ, ಚುಲುವರಾಯ, ಧೂತರಾಯಸ್ವಾಮಿ ಹಾಗೂ ಕೆಂಚರಾಯಸ್ವಾಮಿಗೆ ಭಕ್ತರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಗ್ರಾಮಸ್ಥರಿಂದ ಪರುವು ಸೇವೆ ಜರುಗಿತು. ಯಾದಾಪುರ, ಬೈರಾಂಬುಧಿ, ಹಿರಿಯೂರು, ಬಿಸಿಲೇಹಳ್ಳಿ, ಕಾಟೀಕೆರೆ, ಅಂಚೇ ಕೊಪ್ಪಲು, ಕಲ್ಲನಾಯ್ಕನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ಚಲುವರಾಯಸ್ವಾಮಿ ಹಾಗೂ ಧೂತರಾಯಸ್ವಮಿ ಕುಣಿತ ನೋಡುಗರ‌್ನು ರಂಜಿಸಿತು.