ಮುಂಬೈ: ಪ್ರೇಕ್ಷಕರು ಥಿಯೇಟರ್‌ಗಳಿಗಿಂತ OTT ನಲ್ಲಿ ಹೆಚ್ಚು ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ಇದನ್ನು ತಡೆಯಲು ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ದೊಡ್ಡ ಪ್ಲ್ಯಾನ್ ಮಾಡಿದ್ದಾರೆ.
ಒಟಿಟಿಯ ಆವೇಗವನ್ನು ತಡೆಯಲು ಅಮೀರ್ ಖಾನ್ ಭರ್ಜರಿ ಪ್ಲಾನ್ ಮಾಡಿದ್ದಾರಂತೆ. ಇದರ ಭಾಗವಾಗಿ ಈ ಮಿಸ್ಟರ್ ಪರ್ಫೆಕ್ಷನಿಸ್ಟ್ ಇನ್ನು ಮುಂದೆ ತಮ್ಮ ಸಿನಿಮಾ ಹಕ್ಕುಗಳನ್ನು ಒಟಿಟಿಗೆ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಅಮೀರ್ ಖಾನ್ ನಟ, ನಿರ್ಮಾಪಕರೂ ಹೌದು. ಸಿನಿಮಾಗಳಿಗಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ, ಅವರು ತಮ್ಮ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಮೊದಲೇ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು 12 ವಾರಗಳವರೆಗೆ ಅಂದರೆ ಚಿತ್ರ ಬಿಡುಗಡೆಯಾದ ಮೂರು ತಿಂಗಳವರೆಗೆ ಮಾರಾಟ ಮಾಡದಿರಲು ಅಮೀರ್ ನಿರ್ಧರಿಸಿದ್ದಾರೆ. ಈ ಮೂಲಕ ಇನ್ನಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಗಿಟ್ಟಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ. ಒಮ್ಮೆ ಚಿತ್ರ ಚೆನ್ನಾಗಿಲ್ಲದಿದ್ದರೆ OTT ಕಡಿಮೆ ಮೊತ್ತವನ್ನು ಕೇಳುತ್ತದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ನಂತರ ಅಮೀರ್ ಖಾನ್ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಮೀರ್ ಖಾನ್ ಸದ್ಯ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ.