“ವೆಟ್ಟೈಯಾನ್’ ಬಳಿಕ ರಜಿನಿಕಾಂತ್ ನಟಿಸುತ್ತಿರುವ ಸಿನಿಮಾ “ಕೂಲಿ’. ಚಿತ್ರಕ್ಕೆ “ಕೈದಿ’, “ಲಿಯೊ’ ಖ್ಯಾತಿಯ ಲೋಕೇಶ್ ಕನಗರಾಜ್ ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. ರಜಿನಿಕಾಂತ್ ಜತೆ ಕನ್ನಡದ ಉಪೇಂದ್ರ, ತೆಲುಗಿನ ನಗಾರ್ಜುನ, ಮಲಯಾಳಂನ ಸೌಬಿನ್ ಶಹೀರ್, ಸತ್ಯರಾಜ್, ಶ್ರುತಿ ಹಾಸನ್, ರೆಬಾ ಮೊನಿಕಾ ಜಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಬಾಲಿವುಡ್ ನಟ ಆಮಿರ್ ಖಾನ್ ಕೂಡ “ಕೂಲಿ’ ಚಿತ್ರತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. 1995ರ “ಆತಂಕ್ ಹೀ ಆತಂಕ್’ ಚಿತ್ರದಲ್ಲಿ ರಜಿನಿಕಾಂತ್ ಮತ್ತು ಆಮಿರ್ ಖಾನ್ ಒಟ್ಟಿಗೆ ನಟಿಸಿದ್ದರು. ಇದೀಗ ಮೂರು ದಶಕಗಳ ಬಳಿಕ ಮತ್ತೆ ಉತ್ತರ ಹಾಗೂ ದಣ ಭಾರತದ ಇಬ್ಬರು ಸ್ಟಾರ್ಗಳು ತೆರೆ ಹಂಚಿಕೊಳ್ಳುತ್ತಿರುವುದು “ಕೂಲಿ’ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ರಾಜಸ್ಥಾನದ ಜೈಪುರದಲ್ಲಿ 10 ದಿನಗಳ ಶೆಡ್ಯುಲ್ ಪ್ಲಾ$್ಯನ್ ಮಾಡಿಕೊಳ್ಳಲಾಗಿದ್ದು, ಇತ್ತೀಚೆಗಷ್ಟೆ ರಜಿನಿಕಾಂತ್ ಶೂಟಿಂಗ್ಗೆ ತೆರಳಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಭಾಗದ ಚಿತ್ರೀಕರಣವೂ ಜೈಪುರದಲ್ಲಿ ನಡೆಯಲಿದೆ. ಇದೇ ತಿಂಗಳ 12ರಂದು ರಜಿನಿಕಾಂತ್ 74ನೇ ವಸಂತಕ್ಕೆ ಕಾಲಿಡಲಿದ್ದು, ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಹೊಸ ಅಪ್ಡೇಟ್ ನೀಡುವ ನಿರೀಕ್ಷೆಯಿದೆ.