More

  ವಿಚ್ಛೇದನದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಆಮೀರ್ ​​​​ಖಾನ್​-ಕಿರಣ್​ ರಾವ್​ ಬಗ್ಗೆ ಅಭಿಮಾನಿಗಳು ಹೇಳಿದ್ದೇನು ಗೊತ್ತಾ?

  ಮುಂಬೈ: ಮಾಜಿ ಪತ್ನಿ ಕಿರಣ್​ ರಾವ್​ ಜತೆ ಮತ್ತೆ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​​ ನಟ ಆಮೀರ್​ ಖಾನ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

  ವಿಚ್ಚೇದನ ಬಳಿಕವೂ ಪತ್ನಿ ಜತೆ ಒಟ್ಟಾಗಿ ಕಾಣಿಸಿಕೊಂಡಿರುವ ಆಮೀರ್​ ಖಾನ್​ ಅಭಿಮಾನಿಗಳಲ್ಲೇ ಪರ -ವಿರೋಧ ಚರ್ಚೆಯಾಗಿದೆ. ಕೆಲವರು ಇದನ್ನು ಪ್ರಬುದ್ಧತೆ ಎಂದರೆ ಇನ್ನೂ ಕೆಲವರು ವಿಚ್ಛೇದನ ಬಳಿಕವೂ ಇದು ಬೇಕಿತ್ತಾ ಎಂದು ಹೇಳಿದ್ದಾರೆ.

  ಬುಧವಾರ ರಾತ್ರಿ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಈ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರ ನಿದ್ದು, ಪುತ್ರ ಆಜಾದ್​​ ಖಾನ್​ಗಾಗಿ ನಾವಿಬ್ಬರು ಸ್ನೇಹಿತರಾಗಿಯೇ ಇದ್ದೇವೆ ಎಂದು ಹೇಳಿಕೊಂಡಿದ್ದರು. ಹಾಗೆಯೇ ಕೆಲ ಸಭೆ-ಸಮಾರಂಭದಲ್ಲಿ ಇಬ್ಬರು ಆಗ್ಗಾಗ್ಗ ಕಾಣಿಸಿಕೊಳ್ಳುವ ಮೂಲಕ ಟ್ರೋಲ್​​ಗೊಳಗಾಗುತ್ತಾರೆ.


  ಇತ್ತೀಚೆಗೆ ಎರಡನೇ ಪತ್ನಿಯಿಂದ ದೂರಾಗಿದ್ದನೆ, ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಘೋಷಿಸಿಕೊಂಡಿದ್ದ ನಟ ಆಮಿರ್​ಖಾನ್ ಮುಂದೆ ನಾವಿಬ್ಬರು ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಎಂದು ಹೇಳಿಕೊಂಡಿದ್ದರು.

  ಇಬ್ಬರನ್ನೂ ಜತೆಯಾಗಿ ನೋಡಿದ ಕೆಲವರು ಹಾಡಿ ಹೊಗಳಿದ್ದು, ಇಬ್ಬರದ್ದೂ ನಿಜವಾಗಿಯೂ ವಿಚ್ಚೇದನ ಆಗಿದೆಯೇ, ಆಗಿರಲು ಸಾಧ್ಯವಿಲ್ಲ ಎಂದರೆ ಇವರು ವಿಚ್ಛೇದಿತರಾಗಿದ್ದರೂ ಸ್ನೇಹಿತರಾಗಿದ್ದಾರೆ,ಇನ್ನೂ ಕೆಲವರು ವಿಚ್ಛೇದನಕ್ಕೊಳಗಾದವರೆಲ್ಲರೂ ಶತ್ರುಗಳಲ್ಲ ಎಂದಿದ್ದಾರೆ.

  ಮೊದಲ ಪತ್ರಿ ರೀನಾರಿಂದಲೂ ದೂರವಾಗಿರುವ ಆಮಿರ್​​ ಖಾನ್​​, ಮಕ್ಕಳ ಸಲುವಾಗಿ ಆಕೆಯ ಜತೆಯೂ ಆಗ್ಗಾಗ್ಗೇ ಕಾಣಿಸಿಕೊಳ್ಳುತ್ತಿರುತ್ತಾರೆ. ಒಟ್ಟಾರೆ ಇಬ್ಬರು ಮಾಜಿ ಪತ್ನಿ ಜತೆಯೂ ಆಮೀರ್​ ಖಾನ್​ ವಿಚ್ಛೇದನ ಬಳಿಕವೂ ಸ್ನೇಹಿತರಾಗಿ ಮುಂದುವರಿದಿರುವುದು ವಿಶೇಷ. (ಏಜೆನ್ಸೀಸ್​​)

  ಊಟ ಇಲ್ಲ ಎಂದಿದ್ದಕ್ಕೆ ಸಿಬ್ಬಂದಿಯನ್ನು ಕೂಡಿಹಾಕಿ ಡಾಬಾಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು! ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

  See also  ನೂರಾರು ಮಂದಿಗೆ ಉದ್ಯೋಗದಾತ ನೀಡಿ ಸಾಧನೆಯ ಹಾದಿ ತೋರಿದ ಬಾಳಯ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts