ತಿಂಗಳಿನಿಂದ ಆಧಾರ ಸೇವೆ ಸ್ಥಗಿತ

blank

ರಟ್ಟಿಹಳ್ಳಿ: ಪಟ್ಟಣದಲ್ಲಿನ ಆಧಾರ್ ಕೇಂದ್ರದ ಸೇವೆ ಸ್ಥಗಿತವಾಗಿರುವುದರಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಬೇರೆ ತಾಲೂಕು ಕೇಂದ್ರಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ವಣವಾಗಿದೆ.

ಈ ಮೊದಲು ಪಟ್ಟಣದ ರಾಣೆಬೆನ್ನೂರ ರಸ್ತೆಯಲ್ಲಿದ್ದ ನಾಡ ಕಚೇರಿಯಲ್ಲಿ ಹೊಸ ಆಧಾರ ಕಾರ್ಡ್ ಮಾಡಲಾಗುತಿತ್ತು. ನೂತನ ತಾಲೂಕು ಆದ ನಂತರ ತಹಸೀಲ್ದಾರ್ ಕಚೇರಿಯಲ್ಲಿ ಆಧಾರ ಕಾರ್ಡ್ ಮಾಡಿಸಲು ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಈ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದ ತಿಂಗಳಿನಿಂದ ಆಧಾರ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಹೊಸ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಲು ಹಿರೇಕೆರೂರು, ರಾಣೆಬೆನ್ನೂರ, ಹಾವೇರಿಗೆ ಅಲೆದಾಡಬೇಕಾಗಿದೆ.

ಲಾಗಿನ್ ಐಡಿ ಸಸ್ಪೆಂಡ್: ಪಟ್ಟಣ ಸೇರಿದಂತೆ ರಟ್ಟಿಹಳ್ಳಿ ತಾಲೂಕಿಗೆ 63 ಗ್ರಾಮಗಳು ಒಳಪಡುತ್ತವೆ. ಸ್ಥಳೀಯ ನಿವಾಸಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಆಧಾರ ಕಾರ್ಡ್​ಗಾಗಿ ರಟ್ಟಿಹಳ್ಳಿಯ ತಾಲೂಕು ಕಚೇರಿ ಅವಲಂಬಿಸಿದ್ದಾರೆ. ಈ ಕಚೇರಿಯಲ್ಲಿ ಆಧಾರ ಕಾರ್ಡ್ ಮಾಡುತ್ತಿದ್ದ ಸಿಬ್ಬಂದಿ ಕಿರಣಕುಮಾರ ಹಿರೇಗೌಡರ ಅವರ ಆಧಾರ ಸೂಪರ್​ವೈಸರ್ ಲಾಗಿನ್ ಐಡಿ ಸಸ್ಪೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಆಧಾರ ಸೇವೆ ಸ್ಥಗಿತವಾಗಿದೆ. ಇಲ್ಲಿ ಸೇವೆಯನ್ನು ಪ್ರಾರಂಭಿಸಲು ಮುಖ್ಯ ಕಚೇರಿಯಿಂದ ಹೊಸದಾಗಿ ಲಾಗಿನ ಐಡಿ ಕೊಡಬೇಕು. ಇಲ್ಲವಾದರೆ, ಈಗಾಗಲೇ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸುತ್ತಿರುವ ಮತ್ತೋರ್ವ ಸಿಬ್ಬಂದಿ ಆರ್.ಜಿ. ಚೇತನಕುಮಾರ ಆಧಾರ ಸೂಪರ್​ವೈಸರ್ ಲಾಗಿನ್ ಹೊಂದಿದ್ದು, ಅವರಿಗೆ ಅನುಮತಿ ನೀಡಿ ಸೇವೆ ಪ್ರಾರಂಭಿಸಬೇಕಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೆ ಮುಖ್ಯ ಕಚೇರಿಯವರು ಇದನ್ನು ಮನಗಂಡು ಸೇವೆಯ ಪ್ರಾರಂಭಕ್ಕೆ ಸಮ್ಮತಿಸಬೇಕಾಗಿದೆ.

ಪ್ರಾರಂಭವಾಗದ ಸೇವೆ: ಆಧಾರ ಕಾರ್ಡ್ ಮಾಡಲು ಸರ್ಕಾರದಿಂದ ಕೆವಿಜಿ ಬ್ಯಾಂಕ್ ಮತ್ತು ಅಂಚೆ ಕಚೇರಿಗೆ ಅನುಮತಿ ನೀಡಲಾಗಿದೆ. ಆದರೆ, ಪಟ್ಟಣದ ಕೆವಿಜಿ ಬ್ಯಾಂಕ್​ನಲ್ಲಿ ಆಧಾರ ಸೇವೆ ಪ್ರಾರಂಭಿಸಿಲ್ಲ. ಸ್ಥಳೀಯ ಅಂಚೆ ಕಚೇರಿಯಲ್ಲಿ ಸೇವೆ ಇದ್ದರೂ, ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಪ್ರತಿಯೊಂದು ಸೇವೆಗೆ ಆಧಾರ ಕಾರ್ಡ್ ಪ್ರಮುಖ. ನಮ್ಮ ಸಂಬಂಧಿಕರ ಆಧಾರ ಕಾರ್ಡ್ ಮಾಡಿಸಲು ಅನೇಕ ಬಾರಿ ಇಲ್ಲಿನ ತಾಲೂಕು ಕಚೇರಿಗೆ ಭೇಟಿ ನೀಡಿದ್ದೇನೆ. ಕಚೇರಿಯಲ್ಲಿ ಆಧಾರ ಕಾರ್ಡ್ ಸೇವೆ ಸ್ಥಗಿತವಾಗಿರುವುದರಿಂದ ರಾಣೆಬೆನ್ನೂರಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಸೇವೆ ಪ್ರಾರಂಭಿಸಬೇಕು.
| ಸುನೀಲ ನಾಯಕ, ಸ್ಥಳೀಯ ನಿವಾಸಿ

ಪ್ರತಿದಿನ 20 ಹೊಸ ಆಧಾರ ಕಾರ್ಡ್ ಮಾಡಲು ಅನುಮತಿ ಇದೆ. ನಮ್ಮ ಸಿಬ್ಬಂದಿ ಒಂದು ದಿವಸ ಗ್ರಾಮಸ್ಥರ ಒತ್ತಾಯದ ಮೇರೆಗೆ ಹೆಚ್ಚಿನ ಕಾರ್ಡ್ ಮಾಡಲು ಹೋಗಿ ಲಾಗಿನ್ ಐಡಿ ಸಸ್ಪೆಂಡ್ ಆಗಿದೆ. ಈ ಬಗ್ಗೆ ಶೀಘ್ರವೇ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಲಿಖಿತವಾಗಿ ಪತ್ರ ಕಳುಹಿಸಲಾಗಿದೆ.
| ಕೆ.ಗುರುಬಸವರಾಜ, ತಹಸೀಲ್ದಾರ್ ರಟ್ಟಿಹಳ್ಳಿ

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…