ಆಧಾರ್​ ಯಾವುದಕ್ಕೆ ಕಡ್ಡಾಯ, ಯಾವುದಕ್ಕಿಲ್ಲ…

ನವದೆಹಲಿ: ಆಧಾರ್​ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿರುವ ಸುಪ್ರೀಂ ಕೋರ್ಟ್​, ಕೆಲವೊಂದು ಸೇವೆಗೆ ಆಧಾರ್​ ಅನ್ನು ಕಡ್ಡಾಯಗೊಳಿಸಿದೆ. ಕೆಲವಕ್ಕೆ ಆಧಾರ್​ ನೀಡುವುದನ್ನು ಕಡ್ಡಾಯವಲ್ಲ ಎಂದು ತಿಳಿಸಿದೆ.

ಯಾವುದಕ್ಕೆ ಕಡ್ಡಾಯ

  • ಪಾನ್​ಗೆ ಆಧಾರ್​ ಅನ್ನು ಲಿಂಕ್​ ಮಾಡಲೇ ಬೇಕು.
  • ಅದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವಾಗಲೂ ಬೇಕು ಆಧಾರ್​.
  • ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಲು ಆಧಾರ್​ ನೀಡಲೇಬೇಕು.

ಕಡ್ಡಾಯವಲ್ಲ

  • ಯುಜಿಸಿ, ಎನ್​ಇಇಟಿ, ಸಿಬಿಎಸ್​ಇ ಪರೀಕ್ಷೆ ಆಧಾರ್​ ಕೇಳುವಂತಿಲ್ಲ.
  • ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವಾಗಲೂ ನೀಡುವಂತಿಲ್ಲ.
  • ಖಾಸಗಿ ಕಂಪನಿಗಳೂ ವಿಶಿಷ್ಟ ಗುರುತಿನ ಚೀಟಿಯನ್ನು ಕೇಳುವಂತಿಲ್ಲ. ಅಲ್ಲದೆ, ಆಧಾರ್​ ಪ್ರಾಧಿಕಾರವೂ ತನ್ನ ಮಾಹಿತಿಯನ್ನು ಖಾಸಗಿಯವರಿಗೆ ನೀಡುವಂತಿಲ್ಲ (ಸೆಕ್ಷನ್​ 57 ರದ್ದು)
  • ಮೊಬೈಲ್​ ಸಿಮ್​ ಪಡೆಯುವಾಗಲೂ ಬೇಕಾಗಿಲ್ಲ.
  • ಬ್ಯಾಂಕ್​ ಖಾತೆ ತೆರಯುವ ಸಂದರ್ಭದಲ್ಲಿಯೂ ಆಧಾರ ಕೊಡಬೇಕಿಲ್ಲ.
  • ಡಿಜಿಟಲ್​ ವಾಲೆಟ್​ಗಳು (ಉದಾ: Paytm, ಅಮೆಜಾನ್​ ಪೇ) ವಿಶಿಷ್ಟ ಗುರತಿನ ಸಂಖ್ಯೆ ನೀಡಬೇಕಿಲ್ಲ.