22.8 C
Bengaluru
Saturday, January 18, 2020

ಸಂಗಾತಿಯ ಆಸೆ ತಂದ ಆಪತ್ತು

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಖಾಸಗಿ ಬ್ಯಾಂಕೊಂದರ ಸೀನಿಯರ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ 65 ವರ್ಷ ವಯಸ್ಸಿನ ಶ್ರೀನಿವಾಸನ್​ರ ಪತ್ನಿ ವಾಸಂತಿಯೂ ಬ್ಯಾಂಕಿನ ಉದ್ಯೋಗಿಯಾಗಿದ್ದು ಗಂಡ ನಿವೃತ್ತಿ ಹೊಂದಿದಾಗ ಸ್ವಯಂನಿವೃತ್ತಿ ಪಡೆದರು. ಅವರ ಇಬ್ಬರೂ ಪುತ್ರಿಯರು ಲಗ್ನವಾಗಿ ಅಮೆರಿಕದಲ್ಲಿದ್ದರು. ಹಿರಿಯ ಪುತ್ರಿ ಗರ್ಭಿಣಿಯಾದಾಗ ಇಬ್ಬರೂ ಅಮೆರಿಕಕ್ಕೆ ಹೋಗಿದ್ದು ಹೆರಿಗೆಯಾದ ನಂತರ ಶ್ರೀನಿವಾಸನ್ ಸ್ವದೇಶಕ್ಕೆ ವಾಪಸಾಗಿದ್ದರು. ವಾಸಂತಿ ಮಗಳ ಬಾಣಂತನಕ್ಕಾಗಿ ಅಮೆರಿಕದಲ್ಲಿಯೇ ಇದ್ದರು.

ಮನೆಗೆ ವಾಪಸಾದ ನಂತರ ಶ್ರೀನಿವಾಸನ್​ಗೆ ಪತ್ನಿಯಿಲ್ಲದ ಜೀವನ ‘ಬೋರ್’ ಎನಿಸತೊಡಗಿತು. ಪುಸ್ತಕಗಳು, ಗೆಳೆಯರ ಮನೆಗಳು, ಸಿನಿಮಾ, ಕ್ಲಬ್​ಗಳು ಯಾವವೂ ಅವರ ಬೇಸರವನ್ನು ದೂರಮಾಡಲಿಲ್ಲ. ಸಮಯ ಕಳೆಯಲು ಅಂತರ್ಜಾಲದ ಮೊರೆ ಹೋಗಿ ಕುತೂಹಲಕಾರಿ ತಾಣಗಳನ್ನು ಹುಡುಕತೊಡಗಿದರು.

ಆಗ ಅವರಿಗೆ ‘ನಿಮಗೆ ಲೈಫ್ ಬೋರ್ ಎನ್ನಿಸಿದೆಯೇ? ನಿಮ್ಮ ಜೀವನವನ್ನು ರಂಗೇರಿಸಲು ನಮ್ಮಲ್ಲಿಗೆ ಬನ್ನಿ’ ಎನ್ನುವ ಜಾಹೀರಾತು ಎದುರಾಯಿತು. ಕುತೂಹಲ ತಡೆಯಲಾರದೆ ಶ್ರೀನಿವಾಸನ್ ಆ ಜಾಲತಾಣಕ್ಕೆ ಹೋದರು. ಅದೊಂದು ಆನ್​ಲೈನ್ ಡೇಟಿಂಗ್ ಪೋರ್ಟಲ್, ಅಂದರೆ ಸ್ತ್ರೀಯರು ಮತ್ತು ಪುರುಷರು ತಮಗೆ ಇಷ್ಟವಾಗುವವರನ್ನು ಅಂತರ್ಜಾಲದ ಮೂಲಕ ಸಂಧಿಸಿ ಕಂಪ್ಯೂಟರ್ ಮೂಲಕವೇ ಸಂಭಾಷಿಸಿ ಸಮಯ ಕಳೆಯುವ ತಾಣ. ಇದರಲ್ಲಿಯೂ ಎರಡು ಬಗೆಗಳಿದ್ದವು, ವಿಡಿಯೋ ಚಾಟ್ ಮತ್ತು ವಿಡಿಯೋ ರಹಿತ ಚಾಟ್.

ಇದೇ ರೀತಿಯ ಇತರ ಡೇಟಿಂಗ್ ತಾಣಗಳನ್ನು ಹುಡುಕಿದಾಗ ತಮಗೆ ಬೇಕಾದವರನ್ನು ಮುಖತಃ ಭೇಟಿಮಾಡುವ ಅವಕಾಶ ಕೊಡುವ ಜಾಲತಾಣವೊಂದು ಅವರಿಗೆದುರಾಯಿತು. ತಮಗಿಷ್ಟವಾದವರ ಜತೆ ಕುಳಿತು ಹರಟೆ ಹೊಡೆಯುವ ಅವಕಾಶವಿರುವುದನ್ನು ಮನಗಂಡ ಶ್ರೀನಿವಾಸನ್ ಆ ತಾಣವನ್ನು ಸಂರ್ಪಸಿದರು. ನೋಂದಣಿ ಶುಲ್ಕವೆಂದು 50,000 ರೂಪಾಯಿ ಕೊಡಲು ಆ ಸಂಸ್ಥೆಯ ಸಂಪರ್ಕಾಧಿಕಾರಿಣಿ ಹೇಳಿದಾಗ ‘ಏಕಿಷ್ಟು ದುಬಾರಿ’ ಎಂದು ಶ್ರೀನಿವಾಸನ್ ಪ್ರಶ್ನಿಸಿದರು.

‘ನಮ್ಮ ಬಳಿ ನೋಂದಾಯಿಸುವವರು ಮರ್ಯಾದಸ್ಥರು ಎಂದು ತಿಳಿಯಲು ನಾವು ಅವರ ಚಾರಿತ್ರ್ಯದ ಪರಿಶೀಲನೆ ಮಾಡಿಸಬೇಕು, ಒಂದು ವೇಳೆ ಸದಸ್ಯರಿಂದ ಏನಾದರೂ ದೂರುಗಳು ಬಂದರೆ ಅಥವಾ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ವಕೀಲರ ಶುಲ್ಕ ಕೊಡಬೇಕಾಗುತ್ತದೆ. ನಮ್ಮ ತಾಣದ ಎಲ್ಲ ಸದಸ್ಯರ ರಕ್ಷಣೆಗಾಗಿ ಈ ರೀತಿ ಮಾಡುತ್ತಿದ್ದೇವೆ. ನೀವು ಸದಸ್ಯತ್ವ ಬಿಟ್ಟ ನಂತರ ನಿಮ್ಮ ಶುಲ್ಕದಲ್ಲಿ ಶೇಕಡ 10ರಷ್ಟನ್ನು ಮುರಿದುಕೊಂಡು ಉಳಿದಿದ್ದನ್ನು ಹಿಂತಿರುಗಿಸುತ್ತೇವೆ’ ಎಂದಳು ಆಕೆ.

ಇದಕ್ಕೊಪ್ಪಿದ ಶ್ರೀನಿವಾಸನ್ ಆ ಪೋರ್ಟಲ್​ಗೆ ಸದಸ್ಯತ್ವ ಪಡೆದದ್ದಲ್ಲದೆ ಕೇವಲ ವೀಡಿಯೋ ಚಾಟ್ ಮಾಡುವ ಅವಕಾಶವಿರುವ ಇನ್ನೊಂದು ತಾಣಕ್ಕೂ ಸದಸ್ಯರಾದರು. ನೋಂದಣಿಯಾದ ನಂತರ ಒಂದು ಜಾಲತಾಣದ ಮೀರಾ ಎನ್ನುವವಳು ಮೊಬೈಲ್ ಮೂಲಕ ಶ್ರೀನಿವಾಸನ್​ರನ್ನು ಸಂರ್ಪಸಿ, ‘ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಐವರು ಸ್ತ್ರೀಯರನ್ನು ಆಯ್ಕೆ ಮಾಡಿದ್ದೇವೆ, ಅವರನ್ನು ನೀವು ವಿಡಿಯೋ ಮೂಲಕ ಮಾತನಾಡಿಸಬಹುದು ಹಾಗೂ ಭೇಟಿಯನ್ನೂ ಮಾಡಬಹುದು. ಅವರಲ್ಲಿ ಎಷ್ಟು ಜನರ ಜತೆಗೆ ಮಾತನಾಡಬಯಸುವಿರಿ?’ ಎಂದು ಪ್ರಶ್ನಿಸಿದಳು. ‘ಏಕೆ’ ಎಂದು ಕೇಳಿದಾಗ ‘ನೀವು ಡೇಟಿಂಗ್ ಮಾಡುವವರ ಸಂಖ್ಯೆ ಮೇಲೆ ನಿಮ್ಮ ವಾರ್ಷಿಕ ಶುಲ್ಕ ಅವಲಂಬಿತ’ ಎಂದಳು.

ಆ ಐವರಲ್ಲಿ ಶ್ರೀನಿವಾಸನ್ ಇಬ್ಬರನ್ನು ಆಯ್ಕೆ ಮಾಡಿ ‘ನನ್ನ ಪತ್ನಿ ಮೂರು ತಿಂಗಳಲ್ಲಿ ಮನೆಗೆ ಹಿಂತಿರುಗುವ ಕಾರಣದಿಂದ ನನಗೆ ಮೂರು ತಿಂಗಳ ಸದಸ್ಯತ್ವ ಸಾಕು’ ಎಂದರು. ಆಕೆ ‘ನಮ್ಮ ನಿಯಮಗಳನ್ವಯ ಅರ್ಧ ವರ್ಷದ ಶುಲ್ಕ ತುಂಬಲೇ ಬೇಕು. ಇಬ್ಬರಿಗಾಗಿ ನೀವು ಎರಡು ಲಕ್ಷ ರೂ.ಗಳನ್ನು ನಮ್ಮ ಬ್ಯಾಂಕ್ ಅಕೌಂಟಿಗೆ ತುಂಬಿ’ ಎಂದಳು. ಹಣ ತುಂಬಿದ ನಂತರ ಮೀರಾ ಮತ್ತೆ ಅವರಿಗೆ ಫೋನ್ ಮಾಡಿ, ‘ನೀವು ಆಯ್ಕೆ ಮಾಡಿರುವ ಇಬ್ಬರಿಗೂ ನಾವು ವಿಮೆ ಮಾಡಿಸಬೇಕು, ಹೀಗಾಗಿ ಇನ್ನೂ ಒಂದು ಲಕ್ಷ ರೂ. ಡಿಪಾಸಿಟ್ ತುಂಬಿ’ ಎಂದಳು.

ಮರುಮಾತನಾಡದೆ ಶ್ರೀನಿವಾಸನ್ ಆ ಹಣವನ್ನೂ ತುಂಬಿದರು. ತಾವು ಆಯ್ಕೆ ಮಾಡಿದ್ದ ಇಬ್ಬರ ಜತೆಗೂ ಶ್ರೀನಿವಾಸನ್ ಆರಂಭದಲ್ಲಿ ವೀಡಿಯೋ ಚಾಟ್ ಮಾಡತೊಡಗಿದರು. ರಾತ್ರಿ ಹಗಲೆನ್ನದೆ ಗಂಟೆಗಟ್ಟಲೆ ಹರಟೆ ಹೊಡೆಯತೊಡಗಿದರು. ಅವರಲ್ಲಿ ಪ್ರಿಯಾ ಎನ್ನುವವಳು ಅವರಿಗೆ ಇಷ್ಟವಾದಳು. ವಾರದ ನಂತರ ಆಕೆ, ‘ನಾವು ಪರಸ್ಪರ ಭೇಟಿಯಾಗಿ ಒಬ್ಬರನ್ನೊಬ್ಬರು ಇನ್ನಷ್ಟು ಅರಿಯಬೇಕು, ನಿಮ್ಮ ಮನೆಗೆ ಬರಲೇ?’ ಎಂದಾಗ ಹೌಹಾರಿದ ಇವರು ‘ಬೇಡ’ ಎಂದರು. ಕಡೆಗೆ ಅವರಿಬ್ಬರೂ ಪಂಚತಾರಾ ಹೋಟೆಲೊಂದರಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದರು.

ಏತನ್ಮಧ್ಯೆ ಶ್ರೀನಿವಾಸನ್ ಇನ್ನೊಂದು ಜಾಲತಾಣದ ಮಮತಾ ಎನ್ನುವವಳೊಡನೆಯೂ ವೀಡಿಯೋ ಚಾಟ್ ಮುಂದುವರಿಸಿದ್ದರು. ಒಂದು ರಾತ್ರಿ ಆಕೆ ‘ನಾನು ನನ್ನ ವಾಟ್ಸಪ್ ನಂಬರ್ ಕೊಡುವೆ, ಅದರ ಮೂಲಕ ಚಾಟ್ ಮಾಡೋಣ’ ಎಂದಾಗ ಶ್ರೀನಿವಾಸನ್ ಆ ನಂಬರಿಗೆ ಕಾಲ್ ಮಾಡಿದರು. ಮಮತಾ ಮಾತನಾಡುತ್ತಲೇ ತನ್ನ ಮೇಲರಿವೆಯನ್ನು ಕಳಚಿ ತನ್ನ ಅಂಗಸೌಷ್ಟವವನ್ನು ಪ್ರದರ್ಶಿಸಿದಾಗ ಅವರು ಹೌಹಾರಿದ್ದಂತೂ ನಿಜ.

‘ನೀವು ಹೆದರಬೇಕಾದ್ದಿಲ್ಲ, ನನ್ನ ಇಡೀ ದೇಹವನ್ನೇ ನೀವು ನೋಡಬಹುದು, ನಾಳೆ ಸಂಜೆ ನಗರ ಮಧ್ಯಭಾಗದಲ್ಲಿರುವ ಇಂತಹ ಸರ್ವೀಸ್ ಅಪಾರ್ಟ್​ವೆುಂಟ್​ಗೆ ಬನ್ನಿ’ ಎಂದವಳು ಆಹ್ವಾನಿಸಿದಾಗ ಶ್ರೀನಿವಾಸನ್ ಬೆವೆತು ಹೋದರು. ಆದರೂ ಚಪಲ ತೀರಿಸಿಕೊಳ್ಳಲು ಮಾರನೆಯ ಮಧ್ಯಾಹ್ನ ಆಕೆ ಹೇಳಿದ ಸರ್ವೀಸ್ ಅಪಾರ್ಟ್​ವೆುಂಟ್​ಗೆ ಹೋದರು. ಅಲ್ಲಂತೂ ಮಮತಾ ಅರ್ಧಬೆತ್ತಲಾಗಿ ಅವರ ತೊಡೆ ಮೇಲೆಯೇ ಕುಳಿತು ಸಲ್ಲಾಪ ನಡೆಸಿದಾಗ ಅವರಿಗೆ ಭಯ ಹಾಗೂ ಸಂತಸ ಏಕಕಾಲದಲ್ಲಿಯೇ ಆದವು. ಅವಳ ಜತೆ ಒಂದೂವರೆ ಗಂಟೆ ಕಳೆದು ಮನೆಗೆ ವಾಪಸಾಗುವಾಗ ಗಾಬರಿಗೊಂಡಿದ್ದ ಅವರು ತಾನು ಮಾಡಿದ್ದು ಸರಿಯಲ್ಲ ಎಂದು ಭಾವಿಸಿದರು.

ಮಾರನೆಯ ದಿನವೇ ಶ್ರೀನಿವಾಸನ್ ಇನ್ನು ಮುಂದೆ ಡೇಟಿಂಗ್ ಮಾಡುವುದೇ ಬೇಡವೆಂಬ ನಿರ್ಧಾರ ಕೈಗೊಂಡರು. ಡೇಟಿಂಗ್ ಸೈಟ್ ಕೊಟ್ಟಿದ್ದ ದೂರವಾಣಿಗೆ ಕರೆ ಮಾಡಿ ತಮ್ಮ ಸದಸ್ಯತ್ವ ರದ್ದುಗೊಳಿಸಿ, ಡಿಪಾಸಿಟ್ ಹಣ ವಾಪಸ್ ಮಾಡಲು ಕೋರಿದರು. ‘ನಿಮ್ಮ ಸದಸ್ಯತ್ವ ಅವಧಿ ಇನ್ನೂ ಉಳಿದಿರುವುದರಿಂದ ಆ ಅವಧಿ ಮುಗಿದ ಕೂಡಲೇ ನಿಮ್ಮ ಹಣ ಮರಳಿಸುತ್ತೇವೆ’ ಎಂಬ ಉತ್ತರ ಬಂತು. ಇವರು ಸುಮ್ಮನಾದರು.

ಕೆಲ ದಿನಗಳ ನಂತರ ಶ್ರೀನಿವಾಸನ್​ಗೆ ಒಂದು ವಾಟ್ಸಪ್ ಸಂದೇಶ ಬಂತು. ಅದರಲ್ಲಿ ತಮ್ಮ ತೊಡೆ ಮೇಲೆ ಅರೆಬೆತ್ತಲೆಯಾಗಿ ಕುಳಿತಿದ್ದ ಮಮತಾಳ ಫೋಟೋ ನೋಡಿದ ಅವರು ಬೆವರತೊಡಗಿದರು. ಚಿತ್ರದ ಜತೆಗಿದ್ದ ಸಂದೇಶದಲ್ಲಿ ‘ಈ ಚಿತ್ರವನ್ನು ನಿಮ್ಮ ಪತ್ನಿ ಹಾಗೂ ಬಂಧುಮಿತ್ರರಿಗೆ ನಾವು ಫಾರ್ವರ್ಡ್ ಮಾಡಬಾರದೆಂದು ನೀವು ಬಯಸುವುದಾದರೆ ನಾವು ಸೂಚಿಸಿರುವ ಬ್ಯಾಂಕ್ ಖಾತೆಗೆ ವಾರದೊಳಗೆ ಹದಿನೈದು ಲಕ್ಷ ರೂಪಾಯಿ ತುಂಬಿ’ ಎಂದು ಬರೆದಿತ್ತು.

ನಡುಗುತ್ತಲೇ ಅದೇ ನಂಬರ್​ಗೆ ಫೋನ್ ಮಾಡಿದ ಶ್ರೀನಿವಾಸನ್ ಕರೆಯನ್ನು ಉತ್ತರಿಸಿದವನ ಜೊತೆ ಚೌಕಾಸಿ ಮಾಡಿ 5 ಲಕ್ಷ ರೂ. ಕೊಡಲು ಒಪ್ಪಿದರು. ನಂತರವೂ ಹೆಚ್ಚಿನ ಹಣದ ಬೇಡಿಕೆ ನಿಲ್ಲಲಿಲ್ಲ. ಏನೂ ಮಾಡಲು ತೋಚದ ಶ್ರೀನಿವಾಸನ್ ಡೇಟಿಂಗ್ ಸಂಸ್ಥೆಗೆ ಕರೆಮಾಡಿ ವಿಷಯ ತಿಳಿಸಿದರು. ‘ಗಂಡು- ಹೆಣ್ಣುಗಳನ್ನು ಪರಿಚಯ ಮಾಡಿಸುವುದಷ್ಟೇ ನಮ್ಮ ಕೆಲಸ, ನೀವು ನಮ್ಮ ಸೈಟ್ ಬಿಟ್ಟು ವಾಟ್ಸ್​ಪ್ ಕಾಲ್ ಮಾಡಿದ್ದರಿಂದ ಹೀಗಾಗಿದೆ, ನಾವಿದಕ್ಕೆ ಜವಾಬ್ದಾರರಲ್ಲ’ ಎಂಬುತ್ತರ ಬಂತು. ಆನಂತರ ಎರಡೂ ಡೇಟಿಂಗ್ ಸಂಸ್ಥೆಗಳು ಸಬೂಬನ್ನು ಹೇಳುತ್ತ ಡಿಪಾಸಿಟ್ ಹಣವನ್ನೂ ವಾಪಸ್ ಮಾಡದಾದಾಗ ಅವರು ಚಿಂತಾಕ್ರಾಂತರಾದರು. ಕಷ್ಟಪಟ್ಟು ಗಳಿಸಿದ್ದ 12 ಲಕ್ಷ ರೂಪಾಯಿ ನಿವೃತ್ತಿ ಜೀವನದಲ್ಲಿ ಕಳೆದುಕೊಂಡ ಪಾಪಪ್ರಜ್ಙೆ ಕಾಡತೊಡಗಿತು.

ಪತ್ನಿ ಭಾರತಕ್ಕೆ ಮರಳಲು ಕೆಲ ದಿನಗಳು ಉಳಿದಾಗ, ಪೊಲೀಸ್ ಅಧಿಕಾರಿಯಾಗಿ ನಿವೃತ್ತಿಹೊಂದಿದ್ದ ತಮ್ಮ ಬಾಲ್ಯಸ್ನೇಹಿತನಿಗೆ ಶ್ರೀನಿವಾಸನ್ ಮುಜುಗರದಿಂದಲೇ ನಡೆದ ವಿಷಯ ತಿಳಿಸಿದರು. ಆತನ ಸೂಚನೆ ಮೇರೆಗೆ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದೂರನ್ನಿತ್ತರು. ಎರಡೂ ಡೇಟಿಂಗ್ ಜಾಲತಾಣಗಳು ಡಿಪಾಸಿಟ್ ಹಣ ವಾಪಸ್ ಮಾಡಿದವು. ಮಮತಾ ಮತ್ತವಳ ಜತೆಗಾರರು ಸುಲಿಗೆ ಆರೋಪಕ್ಕಾಗಿ ಬಂಧನಕ್ಕೊಳಗಾದರು. ಯಾರಿಗೂ ಇನ್ನೂ ಶಿಕ್ಷೆಯಾಗಿಲ್ಲ.

ಏಕಾಂಗಿತನ ಎಲ್ಲರನ್ನೂ ಕಾಡುವುದು ಸಹಜವೇ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಣ ಗಳಿಸುವ ಹಲವಾರು ವಾಮಮಾರ್ಗಗಳನ್ನು ಅಪರಾಧಿಗಳು ಕಂಡುಕೊಂಡಿದ್ದಾರೆ. ಸೈಬರ್ ಪ್ರಪಂಚದಲ್ಲಿ ಅನಾಮಿಕತೆ ದೊರಕುವುದರಿಂದಲೂ ಹಾಗೂ ಹೆಣ್ಣಿನ ಆಕರ್ಷಣೆ ಏಕಾಂಗಿಗಳನ್ನು ಸುಲಭವಾಗಿ ಸೆಳೆಯುವುದರಿಂದಲೂ ಡೇಟಿಂಗ್ ವೆಬ್​ಸೈಟ್​ಗಳು ಅಪರಾಧಿಗಳಿಗೆ ಹಣಗಳಿಸುವ ಸುಲಭ ಮಾರ್ಗವಾಗಿವೆ. ಭಾರತದಲ್ಲಿಯೇ ಇಂತಹ ಸುಮಾರು 60 ಪ್ರಕರಣಗಳು ಪ್ರತಿದಿನವೂ ಬೆಳಕಿಗೆ ಬರುತ್ತಿವೆ.

‘ಪುರುಷರ ಎಲ್ಲ ತೊಂದರೆಗಳೂ ಏಕಾಂಗಿತನದ ಬಗ್ಗೆ ಅವರಿಗಿರುವ ಹೆದರಿಕೆಯಿಂದಲೇ ಉದ್ಭವಿಸುತ್ತವೆ’ ಎಂದ 17ನೆಯ ಶತಮಾನದ ಫ್ರೆಂಚ್ ತತ್ತ್ವಜ್ಞಾನಿ ಜಾನ್ ಡಿ ಲಾ ಬ್ರೂಯೇರೆ. ಇದನ್ನರಿತು ಏಕಾಂಗಿತನ ಹೋಗಲಾಡಿಸಲು ಓದು, ಬರಹ, ಪ್ರವಾಸ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಜತೆಗಾರ್ತಿಯರನ್ನು ಹುಡುಕಲು ಹೋದರೆ ಅಪಾಯ ನಿಶ್ಚಿತವೇ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...