ಕಲಬುರಗಿ: ಸ್ನೇಹಿತರೊಂದಿಗೆ ಸೇರಿ ಈಜಲೆಂದು ಹೋದ ಯುವಕ ಅದೇ ಸ್ನೇಹಿತರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ದುರ್ಘಟಣೆ ಹೊರವಲಯ ರುಕ್ಮೋದ್ಸಿನ ತೋಲಾ ಸಮೀಪದ ಕಲ್ಲುಕಣಿಯಲ್ಲಿ ನಡೆದಿದೆ.
ಮಿಜಗುರಿ ಪ್ರದೇಶದ ನಿವಾಸಿ ಜಾಫರ್ ಐಯೂಬ್ (22) ಮೃತ. ಈತ ಮುಳುಗುತ್ತಿದ್ದರೆ ಅವನ ಸ್ನೇಹಿತರು ನೋಡುತ್ತ ನಿಂತಿದ್ದರು. ಅಷ್ಟೇಅಲ್ಲ ಅದರಲ್ಲಿ ಒಬ್ಬಾತನಂತೂ ಜಾಫರ್ ಮುಳುಗುವುದರ ವಿಡಿಯೋ ಮಾಡಿದ್ದಾನೆ. ಮತ್ತೋರ್ವ ಸುಮ್ಮನೆ ದಡದ ಮೇಲೆ ನಿಂತಿದ್ದ.
ಜಾಫರ್ ಹೇಗೋ ದಡದ ಸಮೀಪ ಬಂದು ತನ್ನನ್ನು ಎತ್ತುವಂತೆ ಸ್ನೇಹಿತರಿಗೆ ಕೈ ತೋರಿಸಿದ್ದಾನೆ. ಆದರೆ ದಡದಲ್ಲಿದ್ದ ಸ್ನೇಹಿತರು ಆ ಬಗ್ಗೆ ಲಕ್ಷ್ಯವನ್ನೇ ಕೊಡಲಿಲ್ಲ. ಸ್ನೇಹಿತರ ಕಣ್ಣೆದುರೇ ಜಾಫರ್ ಜಲಸಮಾಧಿಯಾಗಿದ್ದಾನೆ. ಆತ ಮುಳುಗುತ್ತಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿವೆ.
ಬಳಿಕ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಯುವಕರು ಈಜಲೆಂದು ಹೋಗಿದ್ದ ಸ್ಥಳಕ್ಕೆ ತೆರಳಿದ್ದಾರೆ. ಶವ ಹೊರಗೆ ತೆಗೆಯಲಾಗಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.