ಬೈಕ್ ರ‍್ಯಾಲಿಯಲ್ಲಿ ಸುಳ್ಯದ ಯುವತಿ

ಸುಬ್ರಹ್ಮಣ್ಯ: ಕಾರ್ಗಿಲ್ ವಿಜಯಕ್ಕೆ 25 ವರ್ಷ ತುಂಬಿದ ಪ್ರಯುಕ್ತ ಇ ಟಿವಿಎಸ್ ಮೋಟಾರ್ ಕಂಪನಿ ಜತೆಗೂಡಿ ನಾರಿ ಶಕ್ತಿ ಕಾರ್ಯಕ್ರಮದಡಿ ವಿಜಯ ದಿನದ ಗೌರವಾರ್ಥ ಭಾರತೀಯ ಸೇನೆ ಆಯೋಜಿಸಿದ 25 ಮಹಿಳೆಯರ ಆಲ್‌ವುಮೆನ್ ಬೈಕ್ ರ‍್ಯಾಲಿಯಲ್ಲಿ ಕರ್ನಾಟಕದಿಂದ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದು, ಈ ಪೈಕಿ ಸುಳ್ಯ ತಾಲೂಕು ಗುತ್ತಿಗಾರಿನ ವೃಷ್ಟಿ ಮಲ್ಕಜೆ ಒಬ್ಬರಾಗಿದ್ದಾರೆ. 2000 ಕಿ.ಮೀ ನ ಅತ್ಯಂತ ಕಡಿದಾಡ ಹಾಗೂ ಪ್ರಯಾಸದಾಯಕ ರಸ್ತೆಗಳಲ್ಲಿ ಈ ರ‍್ಯಾಲಿ ಆಯೋಜಿಸಲಾಗಿತ್ತು.

ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರಿನ ಪುರುಷೋತ್ತಮ ಮಲ್ಕಜೆ-ಉಷಾ ಮಲ್ಕಜೆ ದಂಪತಿ ಪುತ್ರಿ ವೃಷ್ಟಿ. ಈ ಬೈಕ್ ರ‍್ಯಾಲಿಯಲ್ಲಿ ಭಾರತೀಯ ಸೇನೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಸೈನಿಕರ ಕುಟುಂಬದ ಮಹಿಳೆಯರು ಭಾಗವಹಿಸಿದ್ದು, ಸೇನಾ ಕುಟುಂಬದ ಹೊರತಾಗಿ ಭಾಗವಹಿಸಿದವರಲ್ಲಿ ವೃಷ್ಟಿಯೊಬ್ಬರೆ.

ಬೈಕ್ ರ‍್ಯಾಲಿಯಲ್ಲಿ ಸುಳ್ಯದ ಯುವತಿ

ಆಮ್ಲಜನಕ ಕೊರತೆ ನಡುವೆ ರೈಡಿಂಗ್

ಹಿಮಾಚಲ ಪ್ರದೇಶದ ಲೇಹ್‌ನಿಂದ ಆರಂಭಗೊಂಡ ರ‌್ಯಾಲಿ ಲಡಾಕ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್ ಹುತಾತ್ಮರ ಸ್ಮಾರಕಕ್ಕೆ ತಲುಪಿತು. ದುರ್ಗಮ ಹಾದಿಯಲ್ಲಿ ನಡೆದ ಬೈಕ್ ಸವಾರಿಯಲ್ಲಿ ವೃಷ್ಟಿ ಅಸಾಮಾನ್ಯ ಸಾಧನೆ ಮೆರೆದಿದ್ದಾರೆ. ಪ್ರಪಂಚದ ಅತ್ಯಂತ ಎತ್ತರದ ಬೈಕ್ ಪಾಸಿಂಗ್ ಪ್ರದೇಶಗಳಾದ ಕರದುಂಗ್ ಲಾ ಮತ್ತು ಓಮ್ಲಿಂಗ್ ಲಾನಂತಹ ಆಮ್ಲಜನಕ ಕೊರತೆ ಇರುವ ಪರ್ವತಗಳಲ್ಲೂ ಬೈಕ್‌ನಲ್ಲಿ ಸಂಚರಿಸಿ ಕಡಿದಾದ ರಸ್ತೆ, ಹೊಳೆಗಳನ್ನು ದಾಟಿ ಮುನ್ನುಗ್ಗಿ ಸಾಹಸ ಮೆರೆದಿದ್ದಾರೆ.

ವೃಷ್ಟಿಯ ಸಾಧನೆ ಹೆಮ್ಮೆ ತಂದಿದೆ. ಗ್ರಾಮೀಣ ಭಾಗದಿಂದ ತೆರಳಿ ಮೇರು ಸಾಧನೆ ಮಾಡಿದ ಇವಳನ್ನು ಸರ್ವರೂ ಶ್ಲಾಘಿಸಿದ್ದಾರೆ. ಈ ಬಗ್ಗೆ ಹಲವರು ನನಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅತ್ಯಂತ ಕಠಿಣ ಹಾದಿಯಲ್ಲಿ ಸಾಧೆ ಮೆರೆದುದು ಶ್ರೇಷ್ಠವಾದುದು.

ಪುರುಷೋತ್ತಮ ಮಲ್ಕಜೆ, ವೃಷ್ಟಿಯ ತಂದೆ
Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…