ಹಾವೇರಿ: ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಯುವಕನೊಬ್ಬ ಆಸಿಡ್ ಎರಚಿ ಪರಾರಿಯಾಗಿರುವ ಘಟನೆ ಕಟ್ಟಿಮನಿ ಗ್ಯಾರೇಜ್ ಬಳಿ ನಡೆದಿದೆ.
ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಬೈಕ್ನಲ್ಲಿ ಬಂದ ಯುವಕ ಆಸಿಡ್ ಎರಚಿದ್ದಾನೆ. ಯುವತಿಯ ಮುಖ,ಕಣ್ಣು ಹಾಗೂ ಕೈ ಮೇಲೆ ಆಸಿಡ್ ಬಿದ್ದಿದೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಅಲ್ಲಿಂದ ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಶಾಸಕ ನೆಹರು ಓಲೇಕಾರ, ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲ್ದಂಡಿ ಆಸ್ಪತ್ರೆಗೆ ಭೇಟಿ ನೀಡಿ ಯುವತಿ ಆರೋಗ್ಯ ಪರಿಶೀಲಿಸಿದರು.
ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲ್ದಂಡಿ ಹೇಳಿದ್ದಾರೆ.
ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.