ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಚ್ಚಿ ಕೊಲೆ ಮಾಡಿದ ಯುವಕ

ಬೆಂಗಳೂರು: ಬೆಂಗಳೂರಿನ ಜೆ.ಸಿ.ಲೇಔಟ್​ನ ಈದ್ಗಾ ಮೈದಾನದ ಬಳಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಅಫ್ರೋಜ್​ ಪಾಷಾ(24) ಮೃತ ದುರ್ದೈವಿ. ಇಮ್ರಾನ್​ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಇಬ್ಬರು ಸ್ನೇಹಿತರಾಗಿದ್ದು ಇತ್ತೀಚೆಗೆ ಮದ್ಯ ಸೇವನೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಇಂದು ಆರೋಪಿಯ ಮನೆಯಲ್ಲಿ ಮತ್ತೆ ಜಗಳ ನಡೆದಿದ್ದು ಕೊಲೆಯಲ್ಲಿ ಅಂತ್ಯ ಗೊಂಡಿದೆ.

ಕೊಲೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *