ಚನ್ನರಾಯಪಟ್ಟಣ: ತಾಲೂಕಿನ ಕೆರೆಚಿಕ್ಕೇನಹಳ್ಳಿ ಗ್ರಾಮದಿಂದ ಮಹಿಳೆ ನಾಪತ್ತೆಯಾಗಿದ್ದಾರೆ.
ಗ್ರಾಮದ ನಿವಾಸಿ ರಮೇಶ ಅವರ ಪತ್ನಿ ಮಂಜುಳಾ(46) ಕಾಣೆಯಾದವರು. ಇತ್ತೀಚೆಗೆ ಕೂಲಿ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಇದುವರೆಗೂ ವಾಪಾಸ್ ಬಂದಿಲ್ಲ. ಕಂಡು ಬಂದರೆ ನಗರ ಪೊಲೀಸ್ ಠಾಣೆ (08176-252333) ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.