ಕಳಸ: ಹೆಣ್ಣು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಸಾರ್ವಜನಿಕವಾಗಿಯೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಂಘಟನೆಗಳಲ್ಲಿ ತೊಡಗಿಸಿಕೊಂಡು ನಮ್ಮಲ್ಲಿರುವ ಕೀಳರಿಮೆ ದೂರ ಮಾಡಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಕಾರ್ಯದರ್ಶಿ ರೇವತಿ ಧರ್ಮಪಾಲ್ ಹೇಳಿದರು.
ಮಂಗಳವಾರ ಅಖಿಲ ಕರ್ನಾಟಕ ಒಕ್ಕಲಿಗ ಕಳಸ ತಾಲೂಕು ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಸಂಘಟನೆಗಳ ಮೂಲಕ ನಮ್ಮ ಗಟ್ಟಿತನವನ್ನು ತೋರಿಸಿಕೊಳ್ಳಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ, ಒಕ್ಕಲಿಗರಲ್ಲಿ ಒಟ್ಟು 110 ಪಂಗಡಗಳಿದ್ದು, ಈ ಎಲ್ಲ ಪಂಗಡಗಳನ್ನು ಒಟ್ಟು ಸೇರಿಸಿ ದೂರ ದೃಷ್ಠಿ ಇಟ್ಟುಕೊಂಡು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಎಂದು ಮಾಡಲಾಗಿದೆ. ಎಲ್ಲ ಪಂಗಡಗಳು ಸೇರಿದಾಗ ನಮ್ಮ ಒಗ್ಗಟ್ಟನ್ನು ಇಡೀ ಸಮಾಜಕ್ಕೆ ತೋರಿಸಿಕೊಡಬಹುದು ಎಂದು ಹೇಳಿದರು.
ಅಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಗಾಯಗೊಂಡು ತವರಿಗೆ ಮರಳಿದ ಯೋಧ ರಾಜಪ್ಪ ಅವರನ್ನು ಗೌರವಿಸಿ ಸಹಾಯಧನ ನೀಡಲಾಯಿತು. ಕಳಸ ತಾಲೂಕು ಘಟಕದ ಅಧ್ಯಕ್ಷೆ ತಾರಾ ರಮೇಶ್, ಒಕ್ಕಲಿಗ ಸಂಘದ ಜಿಲ್ಲಾ ನಿರ್ದೇಶಕ ಸಂತೋಷ್ ಹಿನಾರಿ, ತಾಲೂಕು ಘಟಕದ ನಿರ್ದೇಶಕರಾದ ಅಮಿತಾ ವಿನಾಯಕ, ರೀತಿ ಪ್ರಕಾಶ್, ನಯನ ಸುಂದರೇಶ್, ಪ್ರಿಯಾಂಕ ಸಂತೋಷ್, ಕಾವ್ಯ ರವಿ, ಅನುರಾಧ ಕೃಷ್ಣೇಗೌಡ, ಸಂಗೀತ ವಿವೇಕ್ ಇದ್ದರು.
ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ

ಜಿಮ್ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss
Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…
ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis
Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…