ಆರ್ವಿು ಇಲೆವೆನ್ ತಂಡಕ್ಕೆ ಗೆಲುವು

ಬೆಂಗಳೂರು: ಆರ್ವಿು ಇಲೆವೆನ್ ತಂಡ ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯ ದಾಖಲಿಸಿತು.

ಕೆಎಸ್​ಎಚ್​ಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆರ್ವಿು ಇಲೆವೆನ್ ತಂಡ 5-3 ಗೋಲುಗಳಿಂದ ಏರ್ ಇಂಡಿಯಾ ಮುಂಬೈ ತಂಡವನ್ನು ಮಣಿಸಿತು. ವಿಜಯಿ ತಂಡದ ಪರ ಪ್ರತಾಪ್ ಶಿಂಧೆ (8), ರಜತ್ ರಾಜ್​ಪೂತ್ (14, 50), ಬಿನೆ ಬೆಂಗ್ರ (20), ಸಿರಾಜು ಅಲಿರಾ (59) ಗೋಲು ಗಳಿಸಿದರೆ, ಏರ್​ಇಂಡಿಯಾ ತಂಡದ ಪರ ಅರ್ಜುನ್ ಶರ್ಮ (26) ಹಾಗೂ ಶೀವೇಂದ್ರ ಸಿಂಗ್ (39, 41) ಗೋಲು ಬಾರಿಸಿದರು. ಐಒಸಿಎಲ್ ಹಾಗೂ ಬಿಪಿಸಿಎಲ್ ನಡುವಿನ ಮತ್ತೊಂದು ರೋಚಕ ಕಾಳಗ 5-5 ರಿಂದ ಸಮಬಲಗೊಂಡಿತು.

ಬುಧವಾರದ ಪಂದ್ಯಗಳು: ಐಒಸಿ-ಎಐಸಿ (ಮಧ್ಯಾಹ್ನ 2), ಹಾಕಿ ಕರ್ನಾಟಕ-ಆರ್ವಿು ಇಲೆವೆನ್(ಸಂ.4).

Leave a Reply

Your email address will not be published. Required fields are marked *