ಇಳಕಲ್ಲ (ಗ್ರಾ): ಸಮೀಪದ ಕಂದಗಲ್ಲ ಗ್ರಾಮದಲ್ಲಿ ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿ ಅವುಗಳಿಗೆ ಇಷ್ಟವಾದ ಆಹಾರ ನೀಡಿ ಕಾರಹುಣ್ಣಿಮೆಯನ್ನು ಬುಧವಾರ ಸಂಜೆ ಸಂಭ್ರಮದಿಂದ ಆಚರಿಸಿದರು.
ಗ್ರಾಮದ ಅಗಸಿಬಾಗಿಲಿನ ಗುಡ್ಡೆಕಲ್ಲಿಗೆ ಮತ್ತು ಎತ್ತುಗಳಿಗೆ ಪೂಜೆ ಸಲ್ಲಿಸಲಾಯಿತು. ಅಗಸಿ ಬಾಗಿಲಿಗೆ ಕರಿಯನ್ನು ಕಟ್ಟಿ ಎತ್ತುಗಳನ್ನು ಓಡಿಸುತ್ತಾ ಕರಿ ಹರಿದು ಸಂಭ್ರಮಿಸಿದರು. ಕೊನೆಯಲ್ಲಿ ಬಿಳಿ ಎತ್ತು ಕರಿ ಹರಿಯಿತು.
ಗ್ರಾಮದ ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡ ಪುತ್ರ ರಾಹುಲ ನಾಡಗೌಡ, ಹಿರಿಯರಾದ ಚನ್ನಪ್ಪ ಜಾಲಿಹಾಳ, ಬಸಟೆಪ್ಪ ಸಜ್ಜನ, ರುದ್ರಗೌಡ ಪಾಟೀಲ, ವೀರೇಶ ಸಿಂಪಿ, ಗುರು ಗಾಣಿಗೇರ ಇತರರಿದ್ದರು.