ಬೆಂಗಳೂರು: ಕೋವಿಡ್ ಹಿನ್ನೆಲೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಮುಖ ವೃತ್ತ, ರಸ್ತೆ. ಬೀದಿಗಳು ಬಿಕೋ ಎನ್ನುತ್ತಿವೆ.
ಬೆಳಗ್ಗೆ 6 ರಿಂದ 10ರವರೆಗೂ ಅಗತ್ಯ ವಸ್ತು ಖರೀದಿಗಷ್ಟೇ ಮನೆಯಿಂದ ಹೊರ ಬಂದಿದ್ದ ಜನ ಡೆಡ್ಲೈನ್ ಸಮೀಪಿಸುತ್ತಿದ್ದಂತೆ ಮನೆ ಸೇರಿಕೊಂಡಿದ್ದಾರೆ. ಕೆಲವೆಡೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಎಲ್ಲ ನಾಕಾಬಂದಿಗಳಲ್ಲೂ ಪೊಲೀಸರು ಪ್ರತಿ ವಾಹನಗಳ ದಾಖಲಾತಿ ಪರಿಶೀಲಿಸುತ್ತಿದ್ದಾರೆ. ಕಾರಣ ಇಲ್ಲದೆ ರಸ್ತೆಗಿಳಿದವರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಇನ್ನು ಅನಗತ್ಯವಾಗಿ ಮನೆಯಿಂದ ಹೊರ ಬಂದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನ ಆಗ್ನೇಯ ವಿಭಾಗದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 105 ವಾಹನಗಳನ್ನು ಸೀಜ್ ಮಾಡಲಾಗಿದೆ. ಕೋರಮಂಗಲ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಸುದ್ದಗುಂಟೆಪಾಳ್ಯ, ಆಡುಗೋಡಿ, ತಿಲಕ್ ನಗರ, ಮೈಕೋಲೇಔಟ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕರೊನಾ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್ ಲವ್ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ
ಹಾಡಹಗಲೇ ಫ್ಯಾನ್ಸಿ ಸ್ಟೋರ್ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು