ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಆಘಾತ: ಮಂಡ್ಯದಲ್ಲೂ ತೀವ್ರ ಮುಖಭಂಗ

ಮಂಡ್ಯ: ವಿಧಾನ ಪರಿಷತ್​ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್​ ಪ್ರಾಬಲ್ಯ ಕುಸಿದಿದೆ. ಕಳೆದ ಬಾರಿ ಮಂಡ್ಯ, ಮೈಸೂರು, ಕೋಲಾರ, ತುಮಕೂರು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದ ಜೆಡಿಎಸ್, ಈ ಬಾರಿ ಹಾಸನದಲ್ಲಿ ಮಾತ್ರವೇ ಗೆದ್ದು ಇನ್ನೂ ಮೂರು ಸ್ಥಾನ ಕಳೆದುಕೊಂಡಿದೆ. ಹಾಸನದಲ್ಲಿ ನಿರೀಕ್ಷೆಯಂತೆಯೇ ಸೂರಜ್​ ರೇವಣ್ಣ ಗೆದ್ದಿದ್ದಾರೆ. ಆದರೆ, ಮಂಡ್ಯದಲ್ಲಿ ಜೆಡಿಎಸ್​ಗೆ ತೀವ್ರ ಮುಖಭಂಗ ಉಂಟಾಗಿದೆ. ಜೆಡಿಎಸ್​ನ ಭದ್ರಕೋಟೆ ಎಂದೇ ಗುರುತಿಸಲ್ಪಿಟ್ಟಿದ್ದ ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸೋತಿದ್ದರು. ಮಂಡ್ಯದಲ್ಲಿ … Continue reading ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​ಗೆ ಆಘಾತ: ಮಂಡ್ಯದಲ್ಲೂ ತೀವ್ರ ಮುಖಭಂಗ