ಗಗನಸಖಿಯ ಕೆನ್ನೆ, ಕಿವಿ ಕೊಯ್ದ ಪ್ರಕರಣಕ್ಕೆ ಟ್ವಿಸ್ಟ್​: ಆರೋಪಿ ಪಾಲಕರು ತಿಳಿಸಿದ ಸತ್ಯ

ಬೆಂಗಳೂರು: ಪ್ರೀತಿ ನಿರಾಕರಿಸಿದ ಗಗನಸಖಿ ಕೆನ್ನೆ, ಕಿವಿ ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಲಹಳ್ಳಿಯ ಅಜಯ್​ ಕುಮಾರ್ ಅಲಿಯಾಸ್​ ಜಾಕಿ (32) ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ಈಗ ಆ ಪ್ರಕರಣಕ್ಕೊಂದು ಟ್ವಿಸ್ಟ್​ ಸಿಕ್ಕಿದೆ. ಈಗ ಅಜಯ್​ಕುಮಾರ್​ ಪಾಲಕರು ಸುದ್ದಿಗೋಷ್ಠಿ ನಡೆಸಿ ಗಗನಸಖಿಯ ಮೇಲೆ ಆರೋಪ ಹೊರೆಸಿದ್ದಾರೆ.

ಗಗನಸಖಿ ಹಾಗೂ ಆಕೆಯ ಕುಟುಂಬಸ್ಥರು ಅಜಯ್​ ವಿರುದ್ಧ ಸುಳ್ಳು ದೂರು ನಡೆಸಿ ಜೈಲಿಗೆ ಕಳಿಸಿದ್ದಾರೆ. ಈ ಹಿಂದೆ ಅವರು ಅಜಯ್​ ಬಳಿ ಬಂದು ವ್ಯಕ್ತಿಯೋರ್ವನನ್ನು ಕೊಲೆ ಮಾಡುವಂತೆ ಕೇಳಿದ್ದರು. 2012ರಿಂದಲೇ ಗಗನಸಖಿ ಮತ್ತು ಅಜಯ್​ ನಡುವೆ ಪ್ರೀತಿಯಿತ್ತು. ಅವರಿಬ್ಬರೂ ಪ್ರೀತಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ವಿನಿಮಯ ಮಾಡಿಕೊಂಡ ಹಲವು ಮೆಸೇಜ್​ಗಳೂ ಇವೆ. ಆದರೆ ಇವರಿಬ್ಬರ ಪ್ರೀತಿಗೆ ಗಗನಸಖಿಯ ತಾಯಿ ಶಾರದಾ ಮತ್ತು ಅಂಜನ್​ ಎಂಬುವರು ಅಡ್ಡಿಯಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಬೇರೆ ಶ್ರೀಮಂತರ ಮನೆಗೆ ಮದುವೆಮಾಡಿ ಕಳಿಸುವ ಉದ್ದೇಶದಿಂದ ಹೀಗೆ ಮಾಡಿದ್ದರು ಎಂದು ಅಜಯ್​ ಪಾಲಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *