ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬೇಡಗೆರೆ ಗ್ರಾಮಕ್ಕೆ ಗುರುವಾರ ಗ್ರಾಮಕ್ಕೆ ಆಗಮಿಸಿದ ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ದೊಡ್ಡವೀರೇಗೌಡ ಮಾತನಾಡಿ, ದೊಡ್ಡಬೇಡಗೆರೆ ಗ್ರಾಮದಿಂದ ಹೆಬ್ಬಾಳು ಗ್ರಾಮಕ್ಕೆ ಮೂರು ಕಿಲೋಮೀಟರ್ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತಿತ್ತು. ಇದನ್ನು ಅರಿತ ಸಾರಿಗೆ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಕೋರಿಕೆ ಮೇರೆಗೆ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಈ ಹಿಂದೆ ದೊಡ್ಡಬ್ಯಾಡಿಗೆರೆ ಗ್ರಾಮಕ್ಕೆ ಬಸ್ ಸೌಲಭ್ಯ ಇತು.್ತ ಆದರೆ ಪ್ರಯಾಣಿಕರ ಕೊರತೆ ಕಾರಣದಿಂದ ಬಸ್ ಬರುವುದು ಸ್ಥಗಿತವಾಗಿತ್ತು. ಈ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಅವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಕೊರತೆ ಆಗದಂತೆ ಮಲ್ಲನಹಳ್ಳಿ, ದೊಡ್ಡಬೇಡಗೆರೆ, ಹೆಬ್ಬಾಳು ಮೂಲಕ ಬೇಲೂರಿಗೆ ಸಂಚಾರ ಕಲ್ಪಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಗ್ರಾಮಸ್ಥರಾದ ಮಲ್ಲಿಕಾರ್ಜುನ್. ರಾಜಣ್ಣ, ಚಂದ್ರೇಗೌಡ, ಪುನೀತ್, ನಟರಾಜ್, ಸೋಮಶೇಖರ, ಗಂಗಾಧರಪ್ಪ ಇತರರಿದ್ದರು.