ವಿಜಯಪುರ: ಜಾನಪದ ಸಾಹಿತ್ಯ ಬದುಕಲು ಸನ್ಮಾರ್ಗ ತೋರಿಸಿಕೊಡುತ್ತದೆ. ಮಾನವೀಯ ಮೌಲ್ಯಗಳನ್ನು ಕಾಪಾಡಿದ ಕೀರ್ತಿ ಗ್ರಾಮೀಣ ಜನರಿಗೆ ಸಲ್ಲುತ್ತದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ರಮೇಶ ದೇಸಾಯಿ ಹೇಳಿದರು.
ನಗರದ ಸೋಲಾಪುರ ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡ ಜಾನಪದ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಗೀತೆಗಳು ಬದುಕು ಪರಿವರ್ತನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಜಾನಪದ ಸಾಹಿತ್ಯ ನಮ್ಮ ಸಂಸತಿಯ ಪ್ರತಿಕವಾಗಿದೆ ಎಂದರು.
ಮುಖ್ಯ ಅತಿಥಿ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಮಕ್ಕಳಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಬೆಳೆಸುವ ಅವಶ್ಯವಿದೆ. ಜಾನಪದ ಸಾಹಿತ್ಯಕ್ಕೆ ಪೂರ್ವಜರ ಕೊಡುಗೆ ಅಪಾರವಾಗಿದ್ದು, ರೈತರು ಹಾಗೂ ಮಹಿಳೆಯರು ದಿನನಿತ್ಯ ಕಾಯಕದಲ್ಲಿ ತೊಡಗಿರುವಾಗ ಹಾಡುಗಳನ್ನು ರಚಿಸಿ ಹಾಡಿದ್ದಾರೆ ಎಂದರು.
ಜಾನಪದ ವಿದ್ವಾಂಸ ಶಿವಾನಂದ ಮಂಗಾನವರ, ಶಿವಲೀಲಾ ಮುರಾಳ ಮಾತನಾಡಿದರು. ತತ್ವ ಪದ ವಿದ್ವಾಂಸ ಮಹೆತಾಬ ಕಾಗವಾಡ ಜಾನಪದ ಹಾಡು ಹಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪ ಪ್ರಾಚಾರ್ಯ ಪ್ರವಿಣ ಕುಮಾರ ಮಸೂತಿ, ಡಿ.ಜಿ. ಅಳ್ಳಿಕಟ್ಟಿ, ರವಿ ಖೇಡಗಿ ವೇದಿಕೆಯಲ್ಲಿದ್ದರು. ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಬಿ.ಎನ್. ಬಿರಾದಾರ ಸ್ವಾಗತಿಸಿದರು. ಸಿ.ಎಸ್. ಹಿರೇಮಠ ನಿರೂಪಿಸಿದರು. ಜಿ.ಎಸ್. ಸಜ್ಜನ ವಂದಿಸಿದರು.
ಸುವರ್ಣಾ ಕತ್ನಳ್ಳಿ, ರೇಷ್ಮಾ ಪೀಸೆ, ಭಾಗ್ಯಜ್ಯೋತಿ ಅಂಜು, ಸುನಿತಾ ಮಠಪತಿ, ಮಂಜುಳಾ ಕಾಳಗಿ, ಅನುರಾಧ ಪೀರಗೊಂಡ, ಪೂಜಾ ಹೀರೆಮನಿ, ಬಿ.ವೈ. ಧನಗೊಂಡ, ವೈ.ಪಿ. ತಳವಾರ, ಬಿ.ಬಿ. ಮಾಳಿ, ಶಿವಾನಂದ ಬಜಂತ್ರಿ, ಮಹಾಂತೇಶ ಬಜಂತ್ರಿ, ಎಂ.ವಿ. ತಾವರಖೇಡ, ಡಿ.ಎಂ. ಮ್ಯಾಗೇರಿ, ವೈ.ಎಂ. ಇಂಡಿಕರ, ಎ.ಬಿ. ನದಾಪ ಮತ್ತಿತರರಿದ್ದರು.