ನೆಲ್ಲೂರು: ನಿನ್ನೆಯಷ್ಟೇ (ಮಾ.24) ಈಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಯೋಜನೆಗಳಿಲ್ಲ. ಇಲ್ಲಿ ಎಲ್ಲರ ಕಣ್ಣಿಗೆ ಕಾಣಿಸುತ್ತಿರೋದು ಕೇವಲ ಹಗರಣಗಳು ಮಾತ್ರ ಎಂದು ಆಂಧ್ರಪ್ರದೇಶ ಮಾಜಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಕಿಡಿಕಾರಿದ್ದರು. ಇದೀಗ ತಮ್ಮ ವಿರುದ್ಧ ದಾಖಲಾಗಿರುವ ಅಕ್ರಮ ಪ್ರಕರಣಗಳಿಗೆ ಬೆದರುವುದಿಲ್ಲ ಎಂದು ಕಾಕಣಿ ಗುಡುಗಿದ್ದಾರೆ.
ಇದನ್ನೂ ಓದಿ: ವಿಚ್ಛೇದನ ಅರ್ಜಿ ಸಲ್ಲಿಸಿದ್ದರೂ ನಿಲ್ಲದ ಜಟಾಪಟಿ! ಪೊಲೀಸ್ ಠಾಣೆಯಲ್ಲೇ ಪತಿಗೆ ಹೊಡೆದ ಮಾಜಿ ವಿಶ್ವ ಚಾಂಪಿಯನ್ | Saweety Boora
ನೆಲ್ಲೂರಿನಲ್ಲಿ ಮಾತನಾಡಿದ ಮಾಜಿ ಸಚಿವ, “ನನ್ನ ವಿರುದ್ಧ ಸಮ್ಮಿಶ್ರ ಸರ್ಕಾರ ರಾಜಕೀಯ ಕಿರುಕುಳ ನೀಡಲು ಪ್ರಾರಂಭಿಸಿದೆ” ಎಂದರು. ಕಾಕನಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತತಿಪರ್ತಿಯಲ್ಲಿ ಸ್ಫಟಿಕ ಶಿಲೆಯ ಅಕ್ರಮ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ತಮ್ಮ ವಿರುದ್ಧದ ಅಕ್ರಮ ಪ್ರಕರಣಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಕಣಿ, “ಇದುವರೆಗೆ ಆರು ಪ್ರಕರಣಗಳು ದಾಖಲಾಗಿವೆ. ನಿನ್ನೆ ಒಂದು ಪ್ರಕರಣ ದಾಖಲಾಗಿದೆ. ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದ ದಿನದಿಂದಲೂ ಅವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇಂತಹ ಪ್ರಕರಣಗಳಿಗೆ ನಾನೇನು ಹೆದರುವುದಿಲ್ಲ. ಇಲ್ಲಿ ಹೆದರುವ-ಬೆದರುವ ಮಾತೇ ಇಲ್ಲ. ಒಂದು ರೀತಿಯಲ್ಲಿ ನನ್ನ ವಿರುದ್ಧ ಅಕ್ರಮ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಇದೆಲ್ಲದಕ್ಕೂ ನಾನು ಸಿದ್ಧ, ಸದಾ ಬದ್ಧ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Nikhil Kumaraswamy | ಒಬ್ಬೊಬ್ಬ ಕನ್ನಡಿಗನ ಮೇಲೆ 14,700₹ ಸಾಲ ಬಿದ್ದಿದೆ
“ನಾನು ಬೆದರಿಕೆಗಳಿಗೆ ಹೆದರುವುದಿಲ್ಲ. ಸರ್ಕಾರದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತೇನೆ. ಎಸ್‌ಐಟಿ ಮತ್ತು ವಿಜಿಲೆನ್ಸ್ ತನಿಖೆಗಳಿಗೆ ನಾನು ಹೆದರಿ ಹಿಂದೇಟು ಹಾಕುವುದಿಲ್ಲ. ಈ ಪ್ರಕರಣದ ಕುರಿತು ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಸಹ ಒಂದು ಅರ್ಜಿಯನ್ನು ಸಲ್ಲಿಸುತ್ತೇನೆ” ಎಂದು ಕಾಕಣಿ ಕಿಡಿಕಾರಿದ್ದಾರೆ,(ಏಜೆನ್ಸೀಸ್).