ಕನಕಗಿರಿ (ಕೊಪ್ಪಳ): ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಕನಕಗಿರಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಹರಾಜಿನಲ್ಲಿ 20 ಕೆಜಿ ಬಾಕ್ಸ್ಗೆ 2,350 ರೂ. ಮಾರಾಟವಾಗಿ ದಾಖಲೆ ನಿರ್ಮಿಸಿದೆ. ವಾರದ ಸಂತೆಯಲ್ಲಿ ಪ್ರತಿ ಕೆಜಿಗೆ 150-160 ರೂ.ವರೆಗೆ ಮಾರಾಟವಾಗಿದೆ.
ತರಕಾರಿ ಖರೀದಿಗೆ ಬರುವ ಗ್ರಾಹಕರು ಉಳಿದೆಲ್ಲ ತರಕಾರಿ ಖರೀದಿಗೆ ವ್ಯಯಿಸಿದಷ್ಟೇ ಹಣವನ್ನು ಟೊಮ್ಯಾಟೊ ಒಂದಕ್ಕೇ ನೀಡಬೇಕಿದೆ. ಮಳೆಯಿಂದಾಗಿ ಬೆಳೆ ಹಾಳಾಗಿದೆ. ಇದರಿಂದ ಟೊಮ್ಯಾಟೊ ಆವಕ ಕಡಿಮೆ ಆಗಿರುವುದೇ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಟೊಮ್ಯಾಟೊಗೆ ಬೆಲೆ ಇದ್ದರೂ ರೈತರ ಬಳಿ ಹೆಚ್ಚು ಫಸಲಿಲ್ಲ. ಇರುವ ಬೆಳೆಯಲ್ಲೇ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅತ್ತ ಬೆಲೆ ಏರಿಕೆಯಿಂದ ಗ್ರಾಹಕರು ಕಂಗೆಟ್ಟಿದ್ದಾರೆ.
https://www.vijayavani.net/a-lover-life-is-tragic-end-in-car-udupi/