ಮುಂಬೈ: ಮೂರು ವರ್ಷದ ಹೆಣ್ಣುಮಗು ಆಕೆಯ ತಂದೆಯ ಸ್ನೇಹಿತನ ಕೈಯಿಂದಲೇ ಮೃತಪಟ್ಟಿದ್ದಾಳೆ. ಮತ್ತೋರ್ವ ಬಾಲಕಿ ಹಾಗೂ ಬಾಲಕನೊಂದಿಗೆ ಆಟವಾಡುತ್ತಿದ್ದ ಪುಟ್ಟ ಹುಡುಗಿ ಶನಾಯಾ ಭೀಕರವಾಗಿ ಸಾವನ್ನಪ್ಪಿದ್ದಾಳೆ.
ದಕ್ಷಿಣ ಮುಂಬೈನ ಕೊಲಾಬಾ ಬಡಾವಣೆಯಲ್ಲಿ ಶನಿವಾರ ರಾತ್ರಿ 7.30ಕ್ಕೆ ಸಮಯದಲ್ಲಿ ಹೆಣ್ಣುಮಗುವಿನ ತಂದೆಯ ಸ್ನೇಹಿತ ಆಕೆಯನ್ನು ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ಇದರಿಂದ ತಲೆಗೆ ಪೆಟ್ಟುಬಿದ್ದು ಮೃತಪಟ್ಟಿದ್ದಾಳೆ.
ಆರೋಪಿಯನ್ನು ಅನಿಲ್ ಚುಗಾನಿ (40)ಎಂದು ಗುರುತಿಸಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಗುವನ್ನು ಈತನೇ ಹತ್ಯೆ ಮಾಡಿರುವುದು ಖಚಿತವಾಗಿದೆ. ಆದರೆ, ಮಗುವಿನ ಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಇದನ್ನು ಆದಷ್ಟು ಬೇಗ ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.