ಶಿಮ್ಲಾ: ಮೂರು ಮಹಡಿಯ ಕಟ್ಟಡವೊಂದು ಇಸ್ಪೀಟ್ ಕಾರ್ಡ್ನ ಮನೆಯಂತೆ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಇಂಥದ್ದೊಂದು ಪ್ರಕರಣ ನಡೆದಿದೆ. ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಈ ಅವಘಡ ಸಂಭವಿಸಿದೆ.
ಇಲ್ಲಿನ ಚೋಪಲ್ ಮಾರ್ಕೆಟ್ನಲ್ಲಿ ಬ್ಯಾಂಕ್ವೊಂದರ ಶಾಖೆ, ಢಾಬಾ, ಬಾರ್ ಹಾಗೂ ಇನ್ನಿತರ ಅಂಗಡಿ-ಮುಂಗಟ್ಟುಗಳು ಇದ್ದಿದ್ದ ಈ ಕಟ್ಟಡ ಕುಸಿದು ಬಿದ್ದು ನೆಲಸಮಗೊಂಡಿದ್ದಲ್ಲದೆ, ಭಾಗಶಃ ನೀರಲ್ಲಿ ಕೊಚ್ಚಿಕೊಂಡು ಕೂಡ ಹೋಗಿದೆ.
ಈ ಕಟ್ಟಡದ ಕೊನೆಯ ಮಹಡಿಯಲ್ಲಿ ಯುಕೋ ಬ್ಯಾಂಕ್ನ ಶಾಖೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಶನಿವಾರವಾದ್ದರಿಂದ ರಜೆ ಇತ್ತು. ಅಲ್ಲದೆ ಶಿಥಿಲಗೊಂಡಿರುವ ಈ ಕಟ್ಟಡದಲ್ಲಿದ್ದವರನ್ನು ಮುಂಜಾಗ್ರತೆ ಕ್ರಮವಾಗಿ ತೆರವುಗೊಳಿಸಲಾಗಿತ್ತು.
ಅದಾಗ್ಯೂ ತಳಮಹಡಿಯಲ್ಲಿದ್ದ ಬಾರ್ನಲ್ಲಿ ಕುಳಿತಿದ್ದ ಕೆಲವರು ಕಿಟಕಿಯಲ್ಲಿ ಬಿರುಕು ಮೂಡಿದ್ದನ್ನು ಗಮನಿಸಿ, ಕೂಗಿ ಇತರರಿಗೆ ಎಚ್ಚರಿಸುತ್ತ ತಕ್ಷಣ ಅಲ್ಲಿಂದ ಹೊರಗೆ ಓಡಿಬಂದಿದ್ದರು. ಹೀಗಾಗಿ ಒಳಗಿದ್ದ ಎಲ್ಲರೂ ಕೂಡಲೇ ಹೊರಗೆ ಓಡಿಬಂದಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸುಸ್ತಾಗಿ ಅಲ್ಲೇ ಮಲಗಿದ ಅಜ್ಜಿ!