ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು

ತುಮಕೂರು: ಬೇಸಿಗೆ ಬಂದರೆ ಸಾಕು.. ಹಳ್ಳಿಯ ಕೆರೆ-ನದಿಗಳಲ್ಲಿ ಈಜಿಗೆ-ಮೋಜಿಗೆ ಇಳಿಯುವವರ ಸಂಖ್ಯೆ ಬಹಳ. ಹೀಗೆ ಮೋಜೇ ಮೃತ್ಯುವಾಗಿ ಯುವಕರು ಪ್ರಾಣ ಕಳೆದುಕೊಂಡ ಪ್ರಕರಣಗಳು ಪ್ರತಿವರ್ಷ ಒಂದಷ್ಟು ವರದಿಯಾಗುತ್ತಲೇ ಇರುತ್ತವೆ. ಇದೀಗ ಬೇಸಿಗೆ ಇನ್ನೇನು ಆರಂಭವಾಗಲಿದೆ ಎನ್ನುವಾಗಲೇ ಮೋಜಿನಿಂದಾಗಿ ಸಾವೊಂದು ಸಂಭವಿಸಿದೆ. ಬೆಂಗಳೂರಿನ ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ, ತಿಪಟೂರು ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದ ಗಿರೀಶ್ (26) ಮೃತಪಟ್ಟವರು. ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಸೆಕೆಯಲ್ಲಿ ಮೋಜಿಗಾಗಿ ಚಿಕ್ಕನಾಯಕನಹಳ್ಳಿಯ ಕೆರೆಗೆ ಹಾರಿ ಈಜುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ. ಚಿಕ್ಕನಾಯಕನಹಳ್ಳಿ ಪೊಲೀಸ್ … Continue reading ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು