ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಅದ್ದೂರಿ ಸಿನಿಮಾಗಳ ಪೈಕಿ ಒಂದಾಗಿರುವ ‘ಸಲಗ’ ಚಿತ್ರದ ಆಡಿಯೋ ಬಿಡುಗಡೆಗೆ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಸಾಕ್ಷಿ ಆಗಲಿದ್ದಾರೆ. ಅದರಲ್ಲೂ ‘ದುನಿಯಾ’ ವಿಜಯ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿರುವುದರಿಂದ ಕನ್ನಡದ ಖ್ಯಾತ ನಿರ್ದೇಶಕರನೇಕರು ಆಡಿಯೋ ರಿಲೀಸ್ನಲ್ಲಿ ಭಾಗಿಯಾಗಿ ಶುಭ ಹಾರೈಸಲಿದ್ದಾರೆ. ‘ಟಗರು’ ಬಳಿಕ ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಜ. 5ರಂದು ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಅಂದಿನ ವಿಶೇಷ ಸಮಾರಂಭದಲ್ಲಿ ‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ ‘ಸಲಗ’ ಆಡಿಯೋ ಬಿಡುಗಡೆ ಮಾಡಲಿದ್ದಾರೆ. ವಿಶೇಷವೆಂದರೆ ಇದರಲ್ಲಿ ಕನ್ನಡದ ಖ್ಯಾತ ನಿರ್ದೇಶಕರ ದಂಡೇ ಭಾಗವಹಿಸಲಿದೆ. ಜತೆಗೆ ಪ್ರಸಿದ್ಧ ನಿರ್ವಪಕರೂ ಉಪಸ್ಥಿತರಿರಲಿದ್ದಾರೆ. ‘ಈ ಸಮಾರಂಭಕ್ಕೆ ನಿರ್ದೇಶಕರಾದ ರಿಷಬ್ ಶೆಟ್ಟಿ, ಸಂತೋಷ್ ಆನಂದ್ರಾಮ್ ತರುಣ್ ಸುಧೀರ್, ನಂದಕಿಶೋರ್, ಪವನ್ ಒಡೆಯರ್, ಸಿಂಪಲ್ ಸುನಿ, ಚೇತನ್ಕುಮಾರ್ ಆಗಮಿಸಿ ಶುಭ ಕೋರಲಿದ್ದಾರೆ. ಜತೆಗೆ ‘ಕೆಜಿಎಫ್’ ಖ್ಯಾತಿಯ ನಿರ್ವಪಕ, ‘ಹೊಂಬಾಳೆ ಫಿಲಮ್್ಸ’ನ ವಿಜಯ್ ಕಿರಗಂದೂರು ಮತ್ತು ‘ಅವನೇ ಶ್ರೀಮನ್ನಾರಾಯಣ’ ಮೂಲಕ ಸದ್ದು ಮಾಡುತ್ತಿರುವ ‘ಪುಷ್ಕರ್ ಫಿಲಮ್್ಸ’ನ ಪುಷ್ಕರ್ ಮಲ್ಲಿಕಾರ್ಜುನಯ್ಯ ಆಗಮಿಸಲಿದ್ದಾರೆ. ಮಾತ್ರವಲ್ಲದೆ ಎಡಿಜಿಪಿ ಕಮಲ್ ಪಂತ್, ನಿವೃತ್ತ ಡಿಜಿಪಿ ಓಂಪ್ರಕಾಶ್ ಮುಂತಾದವರೂ ಭಾಗವಹಿಸಲಿದ್ದಾರೆ’ ಎಂಬುದಾಗಿ ನಿರ್ವಪಕ ಕೆ.ಪಿ.ಶ್ರೀಕಾಂತ್ ತಿಳಿಸಿದ್ದಾರೆ. ‘ಸಲಗ’ ಸಿನಿಮಾಗೆ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ‘ದುನಿಯಾ’ ವಿಜಯ್ ತೆರೆ ಮೇಲೆ ಮಿಂಚಲಿದ್ದಾರೆ. ಇವರಿಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳಲಿದ್ದು, ಪ್ರಮುಖ ಪಾತ್ರವೊಂದರಲ್ಲಿ ಡಾಲಿ ಧನಂಜಯ್ ಅಭಿನಯಿಸಿದ್ದಾರೆ.
‘ಟಗರು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ರಾಜ್ ಅವರೇ ‘ಸಲಗ’ಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಟಗರು ಬಂತು ಟಗರು’ ಗೀತೆ ಹಾಡಿದ್ದ ಆಂಟನಿ ದಾಸ್ ‘ಸಲಗ’ದಲ್ಲಿ ‘ಸೂರಿ ಅಣ್ಣ’ ಎಂಬ ಗೀತೆಯನ್ನು ಹಾಡಿದ್ದು, ಆ ಆಡಿಯೋ ಈಗಾಗಲೇ ಕುತೂಹಲ ಮೂಡಿಸಿದೆ. ‘ಸಲಗ’ದ ಆಡಿಯೋ ರೈಟ್ಸ್ ‘ಅಶ್ವಿನಿ ಪ್ರೊಡಕ್ಷನ್ಸ್’ ನ ‘ಎ2 ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿದ್ದು, ಜ. 6ರಂದು ಅದರ ಯೂ-ಟ್ಯೂಬ್ನಲ್ಲಿ ಚಿತ್ರದ ಹಾಡುಗಳು ಲಭಿಸಲಿವೆ.
ಇದು ದುನಿಯಾ ವಿಜಯ್ ಅವರ ಪ್ರಪ್ರಥಮ ನಿರ್ದೇಶನದ ಚಿತ್ರವಾದ್ದರಿಂದ, ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರನೇಕರು ಬಂದು ಶುಭ ಹಾರೈಸಲಿದ್ದಾರೆ. ಅಲ್ಲದೆ, ಹಲವು ಖ್ಯಾತ ನಿರ್ವಪಕರ ಉಪಸ್ಥಿತಿಯೂ ಇರಲಿದೆ.
| ಕೆ.ಪಿ.ಶ್ರೀಕಾಂತ್ ನಿರ್ಮಾಪಕ.